

Bangladesh Attack: ಬಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಹಾಗೂ ಹಿಂದೂಗಳ ದೇವಾಲಯಗಳ ಮೇಲಿನ ದಾಳಿ ಬಾಂಗ್ಲಾದೇಶದಲ್ಲಿ ಮುಂದುವರಿದಿದೆ. ಮೂರು ದೇವಸ್ಥಾನಗಳಲ್ಲಿ 8 ದೇವರ ವಿಗ್ರಹಗಳನ್ನು ದುಷ್ಕರ್ಮಿಗಳು ನೆಲಸಮ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಸಹ ಪ್ರಯೋಜವಾಗಿಲ್ಲ. ಪ್ರಕರಣವು ದಾಖಲಾಗ್ತಿಲ್ಲ, ದಾಖಲಾದರೆ ಬಂಧನವಿಲ್ಲ ಎನ್ನುವಂತಾಗಿದೆ ಸದ್ಯದ ಪರಿಸ್ಥಿತಿ.
ವರದಿಯ ಪ್ರಕಾರ, ಬಾಂಗ್ಲಾದೇಶದ ಮೈಮೆನ್‌ಸಿಂಗ್ ಮತ್ತು ದಿನಾಜ್‌ಪುರದಲ್ಲಿ ಎರಡು ದಿನಗಳು ಕಳೆಯುವುದರೊಳಗೆ ಮೂರು ಹಿಂದೂ ದೇವಾಲಯಗಳಲ್ಲಿನ ಎಂಟು ವಿಗ್ರಹಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಇದು ಹಿಂದೂಗಳ ಮೇಲೆ ಬಾಂಗ್ಲಾದೇಶಿಗರು ನಡೆಸುತ್ತಿರುವ ವಿಧ್ವಂಸಕ ದಾಳಿಗೆ ಬಲವಾದ ಸಾಕ್ಷಿಯಾಗಿವೆ. ವಿಗ್ರಹಗಳನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಸದ್ಯ ಬಂಧಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೈಮೆನ್‌ಸಿಂಗ್‌ನ ಹಲುಘಾಟ್ ಉಪ ಜಿಲ್ಲೆಯಲ್ಲಿ ಗುರುವಾರ (ಡಿ.19) ಮತ್ತು ಶುಕ್ರವಾರದಂದು (ಡಿ.20) ಎರಡು ಹಿಂದೂ ದೇವಾಲಯಗಳಲ್ಲಿನ ಮೂರು ವಿಗ್ರಹಗಳನ್ನು ದಾಳಿಕೋರರು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಹಲುಘಾಟ್ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗಿಲ್ಲ ಎಂದು ಮೂಲಗಳು ತಿಳಿಸಿವೆ,(ಏಜೆನ್ಸೀಸ್).