

ಮೂಡಿಗೆರೆ: ಕಪೂಚಿನ್ ಕೃಷಿಕ ಸೇವಾ ಕೇಂದ್ರ ಮತ್ತು ಬಣಕಲ್ ವಿಮುಕ್ತಿ ಚಾರಿಟಬಲ್ ಟ್ರಸ್ಟ್‌ನಿಂದ ಭಾನುವಾರ ಪಟ್ಟಣದ ಲ್ಯಾಂಪ್ಸ್ ಸಹಕಾರ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಮತ್ತು ನೋಟ್‌ಬುಕ್, ಪೆನ್ನು, ಪೆನ್ಸಿಲ್, ಊಟದ ಬಾಕ್ಸ್ ಮತ್ತು ಬ್ಯಾಗ್‌ಗಳನ್ನು ವಿತರಿಸಲಾಯಿತು.
ವಿಮುಕ್ತಿ ಚಾರಿಟಬಲ್ ಟ್ರಸ್ಟ್ ನಿರ್ದೇಶಕ ಫಾದರ್ ಎಡ್ವಿನ್ ಡಿಸೋಜಾ ಮಾತನಾಡಿ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಶಾಲಾ ಪರಿಕರ ಖರೀದಿಸಲು ತೊಂದರೆಯಾಗುವ ಕಾರಣ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವ ಆತಂಕವಿದೆ. ಸಮಾಜಸೇವಾ ಸಂಸ್ಥೆಗಳು ಆಯಾ ಗ್ರಾಮದ ಬಡತನದಲ್ಲಿರುವ ಕುಟುಂಬದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸಮವಸ್ತ್ರ ಹಾಗೂ ಶೈಕ್ಷಣಿಕ ಪರಿಕರ ನೀಡಲು ಮುಂದಾದರೆ ಬಡವರ ಮಕ್ಕಳು ಕೂಡ ಶಿಕ್ಷಣ ಪಡೆಯುತ್ತಾರೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ನವೀನ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾಗಿರುವುದು ನಾಗರಿಕ ಸಮಾಜದ ಕರ್ತವ್ಯ. ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಕಾರಣ ಬಡ ಕುಟುಂಬದ ಮಕ್ಕಳ ಸಮಸ್ಯೆಗೆ ಮುಕ್ತಿ ದೊರಕಿದೆ. ಆದರೆ ಮಕ್ಕಳಿಗೆ ಬ್ಯಾಗ್, ನೋಟ್‌ಬುಕ್, ಸಮವಸ್ತ್ರ ಒದಗಿಸಲು ನೆರವಾಗಬೇಕಾಗಿದೆ ಎಂದು ತಿಳಿಸಿದರು.
ಹಳೇ ಮೂಡಿಗೆರೆ ಗ್ರಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ಸಾಲ್ದಾನಾ, ನಾಗಲಾಪುರ ಶಾಲೆ ಮುಖ್ಯ ಶಿಕ್ಷಕ ಸುರೇಶ್, ಕಾಫಿನಾಡು ಸಮಾಜ ಸೇವಾ ಸಂಘದ ಅಧ್ಯಕ್ಷ ಹಸೈನಾರ್, ವಿಮುಕ್ತಿ ಶಿಕ್ಷಕರಾದ ಉಷಾ, ಆದರ್ಶ, ದೀಕ್ಷಿತ್, ರಮೇಶ, ನಾಗೇಶ್, ಮುಖಂಡರಾದ ಸೋನಿಯಾ, ಅಭಿಜಿತ್, ಪ್ರದೀಪ್, ರಾಜು, ಶಬಾನಾ, ಶಶಿಕಲಾ, ಕೀರ್ತನಾ, ಚೈತ್ರಾ, ಶ್ರಾವ್ಯಾ ಇತರರಿದ್ದರು