

ಚನ್ನಪಟ್ಟಣ : ಹೈನುಗಾರಿಕೆ ರೈತರಿಗೆ ವರದಾನವಾಗಿದ್ದು, ಸಬ್ಸಿಡಿ ರೂಪದಲ್ಲಿ ದೊರೆಯುವ ಒಕ್ಕೂಟದ ಸವಲತ್ತುಗಳನ್ನು ಬಳಸಿಕೊಂಡು ರೈತರು ಆರ್ಥಿಕ ಸಬಲತೆ ಸಾಧಿಸಬೇಕು ಎಂದು ಬಮುಲ್ ಉಪ ವ್ಯವಸ್ಥಾಪಕ ಡಾ. ವೈ.ಎಚ್. ಹೇಮಂತ್ ಕರೆ ನೀಡಿದರು.
ತಾಲೂಕಿನ ಹನಿಯೂರು ಹಾಲು ಉತ್ಪಾದಕರ ಸಹಕಾರ ಸಂದ ಆವರಣದಲ್ಲಿ ಬುಧವಾರ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ಒಕ್ಕೂಟದ ವತಿಯಿಂದ ಉತ್ಪಾದಕರು ಮತ್ತು ರಾಸುಗಳ ಹಿತಕ್ಕಾಗಿ ವಿಮೆ, ಪಶು ಆಹಾರ, ಖನಿಜ ಮಿಶ್ರಣ ಆಹಾರ ಸೇರಿ ಹಲವು ಸೌಲಭ್ಯಗಳಿವೆ. ಪ್ರತಿಯೊಬ್ಬರೂ ಇದರ ಸದುಪಯೋಗಪಡಿಸಿಕೊಳ್ಳಬೇಕು. ವಾರ್ಷಿಕ ಮಹಾ ಸಭೆಯಲ್ಲಿ ಸಂದ ಆಡಳಿತ ವ್ಯವಸ್ಥೆ, ಲಾಭ, ನಷ್ಟ, ಸಲಹೆ ಸೂಚನೆಗಳನ್ನು ನೀಡುವ ಅಧಿಕಾರ ಸದಸ್ಯರಿಗೆ ಇರುತ್ತದೆ. ಸಂಗಳ ಬೆಳವಣಿಗೆಯಲ್ಲಿ ಸದಸ್ಯರ ಪಾತ್ರ ಅಪಾರವಾದದ್ದು ಎಂದರು.
ಸಂದ ಅಧ್ಯಕ್ಷೆ ಸುಶೀಲಮ್ಮ ವಾತನಾಡಿ, ಎಲ್ಲರ ಸಹಕಾರದಿಂದ ಸಂವು 2020-21ನೇ ಸಾಲಿನಲ್ಲಿ 7,18,806 ರೂ. ನಿವ್ವಳ ಲಾಭ ಗಳಿಸಿದೆ. ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರಿಗೆ ಲಾಭಾಂಶವನ್ನು ವಿಲೇವಾರಿ ವಾಡುವುದಾಗಿ ತಿಳಿಸಿ, ಸಂದ ಬೆಳವಣಿಗೆಗೆ ಕಾರಣವಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಂದ ಮುಖ್ಯಕಾರ್ಯನಿರ್ವಾಹಕಿ ರೂಪ ಲೆಕ್ಕ ಪತ್ರಗಳನ್ನು ಮಂಡಿಸಿ ಒಪ್ಪಿಗೆ, 2021-22ನೇ ಸಾಲಿನ ಅಂದಾಜು ಬಜೆಟ್‌ಗೆ ಸಭೆಯ ಅನುಮೋದನೆ ಪಡೆದುಕೊಂಡರು. ಶಿಬಿರದ ಸಹಾಯಕ ವ್ಯವಸ್ಥಾಪಕ ಎಂ.ಚಂದ್ರಶೇಖರ್, ವಿಸ್ತರಣಾಧಿಕಾರಿ ರಾಜು ಹಾಗೂ ಸಂದ ನಿರ್ದೇಶಕರು ಉಪಸ್ಥಿತರಿದ್ದರು.