ನಟಿ ಶಿಲ್ಪಾ ಶೆಟ್ಟಿ ಪತಿಗೆ ಕೊನೆಗೂ ಸಿಕ್ತು ಜಾಮೀನು; ಅಶ್ಲೀಲ ವಿಡಿಯೋ ದಂಧೆ ಪ್ರಕರಣ

raj kundra
Published on

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾ ಅವರು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲುಪಾಲಾಗಿದ್ದು, ಕೊನೆಗೂ ಜಾಮೀನು ಸಿಕ್ಕಿದ್ದು, ನಾಳೆಯೇ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.

ಅಶ್ಲೀಲ ವಿಡಿಯೋ ತಯಾರಿಸಿ, ಪ್ರಸಾರ ಮಾಡುತ್ತಿದ್ದ ಪ್ರಕರಣದಲ್ಲಿ ರಾಜ್​ ಕುಂದ್ರಾ ಸಿಕ್ಕಿ ಹಾಕಿಕೊಂಡಿದ್ದು, ಕಳೆದ ತಿಂಗಳು ಬಂಧನಕ್ಕೆ ಒಳಗಾಗಿದ್ದರು. ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಅವರನ್ನು ಬಂಧಿಸಿದ್ದರು. ಮ್ಯಾಜಿಸ್ಟ್ರೇಟ್​ ಕೋರ್ಟ್​ ಕುಂದ್ರಾಗೆ ಜಾಮೀನು ಮಂಜೂರು ಮಾಡಿದ್ದು, ನಾಳೆ ಬೆಳಗ್ಗೆ ಆರ್ಥರ್ ರೋಡ್ ಜೈಲಿನಿಂದ ಅವರು ಬಿಡುಗಡೆ ಆಗಲಿದ್ದಾರೆ.

ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಅದನ್ನು 'ಹಾಟ್​​ಶಾಟ್ಸ್​' ಎಂಬ ಒಟಿಟಿ ಮೂಲಕ ಪ್ರಸಾರ ಮಾಡಲಾಗುತ್ತಿತ್ತು. ರಾಜ್ ಕುಂದ್ರಾ ಇದರ ರೂವಾರಿ ಆಗಿದ್ದರು ಎಂದು ಪೊಲೀಸರು ಬಂಧಿಸಿದ್ದರು. ಆರಂಭದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಇವರನ್ನು ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net