

ಬೆಂಗಳೂರು: ಬ್ರಹ್ಮಾಂಡ ಗುರೂಜಿ ಎಂದೇ ಹೆಸರಾಗಿರುವ ನರೇಂದ್ರ ಬಾಬು ಶರ್ಮಾ ಅವರು ಇಂದು ವಿಜಯವಾಣಿ ಕ್ಲಬ್ನಲ್ಲಿ ಪಿತೃಪಕ್ಷ ಆಚರಣೆ ಕುರಿತಂತೆ ವಿವರಣೆ ನೀಡುತ್ತಿದ್ದಾರೆ.
ಪಿತೃಪಕ್ಷದ ಮಹತ್ವವೇನು, ಪಿಂಡಪ್ರದಾನ ಹೇಗೆ, ಪಿತೃಪಕ್ಷ ಆಚರಣೆ ಹೇಗೆ ಎಂಬಿತ್ಯಾದಿ ಮಾಹಿತಿಗಳನ್ನು ಅವರು ನೀಡುತ್ತಿದ್ದು, ಈ ಸಂಬಂಧ ನೀವೂ ಅವರೊಂದಿಗೆ ಮಾತನಾಡಿ ಮತ್ತಷ್ಟು ಮಾಹಿತಿ ಪಡೆಯಬಹುದು, ಅನುಮಾನಗಳನ್ನೂ ಬಗೆಹರಿಸಿಕೊಳ್ಳಬಹುದು.
ಪಿತೃ ಋಣ ತೀರಿಸಿಕೊಳ್ಳಬೇಕಾದ್ದು ಮುಖ್ಯ. ಪಿತೃಪಕ್ಷ ಆಚರಣೆ ಎಂದರೆ ಪಿತೃ ಋಣ, ಭೂಮಿ ಋಣ, ಕರ್ಮ ಋಣ ಎಂದು ಮೂರು ರೀತಿಯ ಋಣ ತೀರಿಸಿಕೊಳ್ಳುವಂಥದ್ದು. ಶ್ರಾದ್ಧಕ್ಕೂ ಶ್ರದ್ಧೆಗೂ ಸಂಬಂಧವಿದೆ. ದೇವತಾ ಕಾರ್ಯಗಳನ್ನು ಮಾಡುವಾಗ ಶ್ರಾದ್ಧ ಕರ್ಮ ಮಾಡಿದ್ದೀರಾ ಎಂದು ಕೇಳುವುದಿದೆ. ಅದಕ್ಕೆ ಅಷ್ಟು ಮಹತ್ವವಿದೆ ಎಂದ ಬ್ರಹ್ಮಾಂಡ ಗುರೂಜಿ, ಮದುವೆಯಾಗದ್ದಕ್ಕೂ, ಮಕ್ಕಳಾಗದ್ದಕ್ಕೂ ಪಿತೃಋಣಕ್ಕೂ ಸಂಬಂಧವಿದೆ ಎಂಬುದನ್ನು ಹೇಳಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಈ ಸಂವಾದಕ್ಕೆ ನೀವೂ ಸೇರಿಕೊಳ್ಳಬಹುದು.
ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ ಪ್ರವೇಶಿಸಿ...