

ಮಂಗಳೂರು: ಭಾರತದಲ್ಲಿ ಉಂಟಾಗುತ್ತಿರುವ ಕರೊನಾ ಸಮಸ್ಯೆಯ ಬಗ್ಗೆ ಪೂರ್ತಿ ವಿಶ್ವವೇ ಬೇಸರ ವ್ಯಕ್ತಪಡಿಸಿದೆ. ಅನೇಕ ರಾಷ್ಟ್ರಗಳು ಭಾರತದ ನೆರವಿಗೆ ಮುಂದೆ ಬಂದಿದ್ದು, ಇದೀಗ ಬಹರೈನ್ ಕೂಡ ದೇಶಕ್ಕೆ ಆಕ್ಸಿಜನ್ ಪೂರೈಕೆ ಮಾಡಿದೆ.
ಕೋವಿಡ್ ಸಂಕಷ್ಟ ಸಮಯದಲ್ಲಿ ಬಹರೈನ್ ಸಹಾಯಹಸ್ತ ಚಾಚಿದ್ದು 40 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ನೆರವು ನೀಡಿದೆ. ಈ 40 ಟನ್ ಆಕ್ಸಿಜನ್ ಹೇರಿಕೊಂಡು ಭಾರತೀಯ ನೌಕಾಪಡೆಯ ಐಎನ್‌ಎಸ್ ತಲ್ವಾರ್ ನೌಕೆ ಬುಧವಾರ ಮಧ್ಯಾಹ್ನ ಮಂಗಳೂರು ಬಂದರು ತಲಪಿದೆ.
20 ಟನ್‌ನ ಎರಡು ಪ್ರತ್ಯೇಕ ಕ್ರಯೋಜೆನಿಕ್ ಕಂಟೈನರ್‌ಗಳಲ್ಲಿ ತುಂಬಿರುವ ಆಕ್ಸಿಜನ್‌ನ್ನು ಸದ್ಯ ಇಳಿಸುವ ಕಾರ್ಯ ನಡೆಯುತ್ತಿದೆ. ಉಚಿತವಾಗಿ ಈ ಆಕ್ಸಿಜನ್ ನಿರ್ವಹಣೆ ಮಾಡುವಂತೆ ಕೇಂದ್ರ ಸರ್ಕಾರ ಎನ್‌ಎಂಪಿಟಿಗೆ ಸೂಚನೆ ನೀಡಿದೆ.