ಕೋಟೆಹೊಳೆಯಲ್ಲಿ ಭದ್ರೆಗೆ ಬಾಗಿನ

kls janapada
ಕಳಸ ತಾಲೂಕಿನ ಕರ್ನಾಟಕ ಜಾನಪದ ಪರಿಷತ್ ಮತ್ತು ಕಸಾಪ ಮಹಿಳಾ ಘಟಕದ ಸದಸ್ಯರಿಂದ ಭದ್ರಾ ನದಿಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ, ಆಶಾ, ಪೂರ್ಣಿಮಾ, ಗಣೇಶ್ ಇತರರಿದ್ದರು.
Published on

ಕಳಸ: ತಾಲೂಕಿನ ಕರ್ನಾಟಕ ಜಾನಪದ ಪರಿಷತ್ ಮತ್ತು ಕಸಾಪ ಮಹಿಳಾ ಘಟಕದ ಸದಸ್ಯರಿಂದ ಭದ್ರಾ ನದಿಯ ಕೋಟೆಹೊಳೆಯಲ್ಲಿ ಬಾಗಿನ ಅರ್ಪಿಸಲಾಯಿತು.
ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ ಮಾತನಾಡಿ, ಈ ಬಾರಿ ಸಮೃದ್ಧವಾಗಿ ಮಳೆಯಾಗಿದ್ದು ಇದು ಅತಿವೃಷ್ಟಿ ಆಗದಿರಲಿ, ಎಲ್ಲರಿಗೂ ಒಳಿತಾಗಲಿ ಎಂದು ತಾಯಿ ಭದ್ರೆಗೆ ಬಾಗಿನ ಅರ್ಪಿಸಿದ್ದೇವೆ ಎಂದು ತಿಳಿಸಿದರು. ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ರಜಿತ್ ಕೆಳಗೂರ್ ಮಾತನಾಡಿ, ಈ ಬಾರಿ ಭದ್ರೆಗೆ ಬಾಗಿನ ಅರ್ಪಿಸಿ ಕೃತಜ್ಞರಾಗಿದ್ದೇವೆ ಎಂದು ಹೇಳಿದರು.
ಕಜಾಪ ಸದಸ್ಯರಾದ ಆಶಾ ರಾಘವೇಂದ್ರ, ಪೂರ್ಣಿಮಾ ಪ್ರಮೋದ್, ನಿಖಿತಾ ಸಂತೋಷ್, ಪ್ರಿಯಾ ಗುರುಪ್ರಸಾದ್, ಗಣೇಶ್, ಶಮೀರ್, ಸುಚಿತಾ ಉದಯ್, ಕಸಾಪ ಮಹಿಳಾ ಘಟಕದ ಸದಸ್ಯರಾದ ಡಾ. ಜಾನಕಿ ಸುಂದರೇಶ್, ವೀಣಾ ಮುರುಗೇಶ್, ಲೀಲಾ ಶ್ರೀಕಾಂತ್, ಗಾಯತ್ರಿ ಹೆಬ್ಬಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net