ಮಾರ್ಚ್ 14 ರಂದು ಬಗ್ಗುಂಡಿ ಕೆರೆಯಲ್ಲಿ ಮೀನು ಹಿಡಿಯುವ ಉತ್ಸವ

images
Published on

ಸುರತ್ಕಲ್: ಕುಳಾಯಿಯ ಪುರಾತನ ಕೋಟೆದ ಬಬ್ಬು ದೈವಸ್ಥಾನದ ನೇಮೋತ್ಸವದ ಪ್ರಯುಕ್ತ ಮೀನು ಹಿಡಿಯುವ ಉತ್ಸವ ಈ ವರ್ಷ ಮಾರ್ಚ್ 14ರಂದು ಮಂಗಳವಾರ ಮೀನ ಸಂಕ್ರಮಣದಂದು ನಡೆಯಲಿದೆ.

2014ರ ಬಳಿಕ ಸಾಂಪ್ರದಾಯಿಕವಾಗಿಯಷ್ಟೇ ನಡೆಯುತ್ತಿದ್ದ ಆಚರಣೆಗೆ ಕಳೆದ ವರ್ಷ ಮತ್ತೆ ಹಿಂದಿನ ಮೆರುಗು ನೀಡುವ ಪ್ರಯತ್ನ ನಡೆದಿತ್ತು. ಈ ಬಾರಿ ಆ ಸಂಪ್ರದಾಯವನ್ನು ಮುಂದುವರಿಸಲು ಸ್ಪಂದನಾ ಫ್ರೆಂಡ್ಸ್ ಸರ್ಕಲ್ ಪಣ ತೊಟ್ಟಿದೆ.

ಪ್ರತಿವರ್ಷ ಈ ದೈವಸ್ಥಾನದ ವರ್ಷಾವಧಿ ಜಾತ್ರೆ ಸಂದರ್ಭ ಬರುವ ಮೀನ ಸಂಕ್ರಮಣದಂದು ಬಗ್ಗುಂಡಿ ಕೆರೆಯಲ್ಲಿ ಮೀನು ಹಿಡಿಯುವ ಉತ್ಸವ ನಡೆಯುತ್ತಿತ್ತು. ಆದರೆ ಕೆರೆಗೆ ಕೊಳಚೆ ನೀರು ಸೇರುತ್ತಿದ್ದ ಕಾರಣ ಎಂಟು ವರ್ಷಗಳಿಂದ ಈ ಆಚರಣೆ ನಿಂತು ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತವಾಗಿತ್ತು. 2022ರಲ್ಲಿ ಸ್ಪಂದನಾ ಫ್ರೆಂಡ್ಸ್ ಕುಳಾಯಿ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬಗ್ಗುಂಡಿ ಕೆರೆ ಉಳಿಸಿ ಅಭಿಯಾನ ಹಮ್ಮಿಕೊಂಡ ಪರಿಣಾಮ ಚರಂಡಿ ಹಾಗೂ ವೆಟ್‌ವೆಲ್‌ನಿಂದ ಕೆರೆಗೆ ಹರಿಯುತ್ತಿದ್ದ ಕೊಳಚೆ ನೀರು ಕಡಿಮೆಯಾಗಿದೆ. ಇದರಿಂದ ಹೆಚ್ಚಿನ ಜನ ಕೆರೆಗೆ ಇಳಿದು ಬಲೆ ಬೀಸಿ ಮೀನು ಹಿಡಿಯಲು ಆಸಕ್ತಿ ತೋರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net