

ಮೆಕ್ಸಿಕೋ: ಪಶ್ಚಿಮ ಮೆಕ್ಸಿಕೋ ಮೃಗಾಲಯದಲ್ಲಿ ಹುಟ್ಟಿದ ಹುಲಿಯ ಮರಿಯೊಂದಕ್ಕೆ ಕೋವಿಡ್ ಎಂದು ನಾಮಕರಣ ಮಾಡಲಾಗಿದೆ. ಕರೊನಾ ಕಾಟಕ್ಕೆ ಇಡೀ ಅಮೆರಿಕವೇ ಸ್ತಬ್ಧವಾಗಿರುವ ಸಮಯದಲ್ಲಿ ಕರೊನಾದಿಂದ ಸ್ಫೂರ್ತಿಗೊಂಡು ಈ ಹೆಸರನ್ನು ಹುಲಿ ಮರಿಗೆ ಇಡಲಾಗಿದೆ.
ಮೃಗಾಯಲಯದ ಮಾಲೀಕರು ಕೋವಿಡ್ ಎಂದು ಹೆಸರಿಸಿದ್ದಾರೆ. ಬೆಂಗಾಲ್ ಟೈಗರ್ ಕೋವಿಡ್ ಮಾರ್ಚ್ 14ರಂದು ಮೆಕ್ಸಿಕೋದ ಕಾರ್ಬೋಡಾ ನಗರದಲ್ಲಿರುವ ಸಣ್ಣ ಜೂನಲ್ಲಿ ಜನಿಸಿತು.
ಕೋವಿಡ್, 8 ವರ್ಷದ ತಾಯಿ ಹುಲಿಗೆ ಜನಿಸಿದೆ. ಸರ್ಕಸ್ ಕಂಪನಿಯಲ್ಲಿ ಹುಲಿಯನ್ನು ವರ್ಷಗಳ ಹಿಂದೆಯೇ ರಕ್ಷಿಸಲಾಗಿತ್ತು. ಕೋವಿಡ್ ತಂದೆಯ ವಯಸ್ಸು 6 ವರ್ಷ. ಖಾಸಗಿ ಮನೆಯೊಂದರಲ್ಲಿದ್ದ ಹುಲಿಯನ್ನು ರಕ್ಷಿಸಲಾಗಿತ್ತು. ಮಾಲೀಕರು ಸುಮಾರು 2 ದಶಕಗಳಿಂದ ಮೆಕ್ಸಿಕೋದಲ್ಲಿ ಜೂ ನಡೆಸುತ್ತಿದ್ದಾರೆ.
ಇನ್ನು ಅಮೆರಿಕದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಲಕ್ಷ ದಾಟಿದ್ದು, ಈವರೆಗೂ ಸಾವಿಗೀಡಾದವರ ಸಂಖ್ಯೆ 2 ಸಾವಿರಕ್ಕೂ ಹೆಚ್ಚಿದೆ. (ಏಜೆನ್ಸೀಸ್)