

ಆಂಧ್ರಪ್ರದೇಶ: ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ, ವೈಷ್ಣವಿ ಚೈತನ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಬೇಬಿ' ಸಿನಿಮಾ ಬಿಡುಗಡೆಗೊಂಡ ಮೊದಲ ದಿನದಿಂದಲೂ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆಯನ್ನು ಕಾಣುತ್ತಿದೆ. ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿರುವ ಈ ಚಿತ್ರ ಸಿನಿಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಸದ್ಯ ಚಿತ್ರದ ಒಟ್ಟು ಕಲೆಕ್ಷನ್ ಎಷ್ಟು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಭಾರತೀಯ ಬಾಕ್ಸ್ ಆಫೀಸ್ನಲ್ಲಿ 'ಬೇಬಿ' ಗಳಿಕೆಯ ವರದಿ ಹೀಗಿದೆ:
ಮೊದಲನೇ ವಾರ: 42.25 ಕೋಟಿ ರೂ.
2ನೇ ವಾರ: 26.75 ಕೋಟಿ ರೂ.
3ನೇ ವಾರದಲ್ಲಿ ಶುಕ್ರವಾರ: 1 ಕೋಟಿ ರೂ.
ಶನಿವಾರ: 1.75 ಕೋಟಿ ರೂ.
ಭಾನುವಾರ: 2.25 ಕೋಟಿ ರೂ.
ಸೋಮವಾರ: 1 ಕೋಟಿ ರೂ.
ಮಂಗಳವಾರ: 1 ಕೋಟಿ ರೂ.
ಇಲ್ಲಿಯವರೆಗೂ ಬಾಕ್ಸ್ ಆಫೀಸ್ನಲ್ಲಿ ಬೇಬಿ ಚಿತ್ರವು ಭಾರತದಲ್ಲಿ ಒಟ್ಟು 76 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಚಿತ್ರ ಇದೀಗ ಟಾಪ್ ನಟರ ಸಿನಿಮಾಗಳನ್ನು ಹಿಂದಿಕ್ಕಿ ಪ್ರದರ್ಶನ ಮತ್ತು ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ,(ಏಜೆನ್ಸೀಸ್).