More

    ಪ್ರತ್ಯೇಕ ಮುಸ್ಲಿಂ ರಾಜಕೀಯ ಶಕ್ತಿ ಸ್ಥಾಪನೆ? : ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಸುಳಿವು

    ಬೆಂಗಳೂರು: ಕಾಂಗ್ರೆಸ್ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಮುಸ್ಲಿಂ ಓಲೈಕೆ ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿದೆ ಎಂಬ ಬಿಜೆಪಿ ಆರೋಪದ ನಡುವೆಯೇ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಪ್ರತ್ಯೇಕ ರಾಜಕೀಯ ಶಕ್ತಿಯೊಂದು ಸ್ಥಾಪನೆಯಾಗಲಿದೆಯೆ?
    ಅಂತಹ ಸುಳಿವೊಂದನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕೊಟ್ಟಿದ್ದಾರೆ.ಪ್ರತ್ಯೇಕ ಮುಸ್ಲಿಂ ಸಮುದಾಯದ ಶಕ್ತಿಯೊಂದು ಜನ್ಮ ತಳೆಯುವ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಇಬ್ರಾಹಿಂ ಮಾಧ್ಯಮಗಳ ಬಳಿ ಹಂಚಿಕೊಂಡಿದ್ದಾರೆ.

    ಸೆಪ್ಟೆಂಬರ್‌ನಿಂದ ಮುಸ್ಲಿಂ ಸಮುದಾಯದವರು ಪಕ್ಷಾತೀತವಾಗಿ ಪ್ರವಾಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ರಾಜ್ಯದಲ್ಲಿ ಪ್ರತ್ಯೇಕ ಮುಸ್ಲಿಂ ಸಮುದಾಯದ ಶಕ್ತಿ ಸ್ಥಾಪನೆ ಆಗುತ್ತದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

    ರಾಜ್ಯದಲ್ಲಿ ಪ್ರತ್ಯೇಕ ಶಕ್ತಿ ಸ್ಥಾಪನೆಗಾಗಿ ಮುಸ್ಲಿಂ ಸಮುದಾಯದ ನಾಯಕರು ಪಕ್ಷಾತೀತವಾಗಿ ಪ್ರವಾಸ ಮಾಡಲಿದ್ದಾರೆ. ಬಿಜೆಪಿ-ಕಾಂಗ್ರೆಸ್ ಹೊರತಾಗಿ ಪ್ರತ್ಯೇಕ ಮೂರನೇ ಶಕ್ತಿ ರಚನೆಗೆ ಪ್ರವಾಸ ಮಾಡುತ್ತಿದ್ದಾರೆ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.
    ಪಕ್ಷಾತೀತವಾಗಿ ಮುಸ್ಲಿಂ ಸಂಘಗಳು ರಾಜ್ಯ ಪ್ರವಾಸ ಮಾಡಲಿವೆ. ಮುಸ್ಲಿಂ ಸಮುದಾಯದ ಎಲ್ಲ ಸಂಘಗಳು ಇದರಲ್ಲಿ ಇರಲಿವೆ. ನಮ್ಮನ್ನೂ ಪಕ್ಷಾತೀತವಾಗಿ ಬನ್ನಿ ಎಂದು ಕರೆದಿದ್ದಾರೆ ಎಂದು ಹೇಳಿದರು.

    ಈ ಪ್ರತ್ಯೇಕ ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಶೇ.90ರಷ್ಟು ಮತದಾನ ಆಗಬೇಕು, ಪಕ್ಷಗಳ ಅಭಿವೃದ್ಧಿ, ಪ್ರಣಾಳಿಕೆ ನೋಡಿ ಜನ ಮತ ಹಾಕಬೇಕು, ಚುನಾವಣೆ ಸಮಯದಲ್ಲಿ ಹಣ ಕೇಳಬಾರದು, ಹಣಕ್ಕೆ ಮತ ಹಾಕಬಾರದು, ಉತ್ತಮ ಅಭ್ಯರ್ಥಿಗಳ ಆಯ್ಕೆ ಮಾಡಬೇಕು
    ಎಂಬ ಅಂಜೆಡಾ ಇಟ್ಟುಕೊಂಡು ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ಇಬ್ರಾಹಿಂ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts