More

  ಸಮಾಜವಾದಿ ಭಾರತ ಸ್ಥಾಪನೆ ಭಗತ್ ಆಶಯ

  ಕುರುಗೋಡು: ಕ್ರಾಂತಿಕಾರಿ ಭಗತ್ ಸಿಂಗ್‌ರ ತತ್ವ ಆದರ್ಶಗಳು ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದು ಶಾಲೆಯ ಮುಖ್ಯೋಪಾಧ್ಯಾಯ ಶೇಕರಪ್ಪ ತಿಳಿಸಿದರು.

  ಇದನ್ನೂ ಓದಿ: ಬಲಿದಾನದ ಮೂಲಕ ಜನರಲ್ಲಿ ಹೋರಾಟದ ಕಿಡಿ ಹಚ್ಚಿದ ಹುತಾತ್ಮ ಭಗತ್ ಸಿಂಗ್ , ರಾಜಗುರು, ಸುಖದೇವ್: ಟಿ.ಆರ್.ಸುನೀಲ್

  ಸಮೀಪದ ಕೆರೆಕೆರೆ ಗ್ರಾಮದಲ್ಲಿ ಎಐಕೆಕೆಎಂಎಸ್ ಸಂಘಟನೆಯಿಂದ ಹುತಾತ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಭಾವಚಿತ್ರ ಮೆರವಣಿಗೆಯಲ್ಲಿ ಇತ್ತೀಚೆಗೆ ಮಾತನಾಡಿದರು.

  ಭಗತ್‌ಸಿಂಗ್ ಅವರ ಹೋರಾಟದ ಉದ್ದೇಶ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವುದು ಅಷ್ಟೆಯಲ್ಲ, ಶಿಕ್ಷಣ, ಆರೋಗ್ಯ, ಉದ್ಯೋಗ, ಮಹಿಳೆಯರಿಗೆ ಭದ್ರತೆ ಸಿಗುವಂತ ಸಮಾಜವಾದಿ ಭಾರತ ಸ್ಥಾಪನೆಯಾಗಬೇಕೆಂಬುದು ಅವರ ಉದ್ದೇಶ ಎಂದರು.

  ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿರಾಜ ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಹಾಗೂ ಭಗತ್ ಸಿಂಗ್ ವಿಚಾರಗಳು ಇಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು ಎಂದರು. ನಿಂಗಪ್ಪ, ರೈತರಾದ ಸಂತೋಷ್, ನಭಿ, ಬಿ.ವೀರೇಶ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts