ಈ ಮಗುವಿಗೆ ಕೈಯಲ್ಲಿ 14, ಕಾಲಲ್ಲಿ 12 ಬೆರಳುಗಳು; ಇದು ದೇವರ ಅವತಾರ ಎಂದು ಮನೆಯವರ ಭಾವನೆ!

Fingers
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಪ್ರತಿ ಕೈಯಲ್ಲೂ ಏಳು ಬೆರಳುಗಳು, ಪ್ರತಿ ಕಾಲಲ್ಲೂ 6 ಬೆರಳಗಳು.. ಹೀಗೆ ಕೈಯಲ್ಲಿ 14, ಕಾಲಲ್ಲಿ 12 ಬೆರಳುಗಳು ಇರುವ ಮಗು ಜನಿಸಿದ್ದು, ಮನೆಯವರು ಈ ಮಗುವನ್ನು ದೇವರ ಅವಾತರ ಎಂದೇ ಭಾವಿಸಿದ್ದಾರೆ.

ರಾಜಸ್ಥಾನದ ಭರತ್​ಪುರದಲ್ಲಿ ಈ ಮಗು ಜನಿಸಿದೆ. 25 ವರ್ಷದ ತಾಯಿಗೆ ಎಂಟನೇ ತಿಂಗಳಲ್ಲೇ ಹೆರಿಗೆಯಾಗಿ ಈ ಮಗು ಜನಿಸಿದೆ. ಹೀಗಾಗಿ ಈ ಸಂಬಂಧ ಏನೂ ಮಾಡಲಾಗಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಮಗು ಆರೋಗ್ಯವಾಗಿದ್ದು, ಅದಕ್ಕೆ ಈ ಹೆಚ್ಚುವರಿ ಬೆರಳುಗಳಿಂದ ಯಾವುದೇ ಅಪಾಯ ಇಲ್ಲದಿರುವುದರಿಂದ ತೆಗೆದುಹಾಕುವ ಅನಿವಾರ್ಯತೆಯೂ ಇಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಂದೆಡೆ ಈ ಮಗುವನ್ನು ಮನೆಯವರು ದೇವಿಯ ಅವತಾರ ಎಂದೇ ಭಾವಿಸಿದ್ದಾರೆ. ಅಂದಹಾಗೆ ಈ ರೀತಿಯ ಬೆಳವಣಿಗೆಯನ್ನು ಪಾಲಿಡ್ಯಾಕ್ಟಿಲಿ (Polydactyly) ಎನ್ನಲಾಗುತ್ತದೆ. ಇಂಥ ಸಂದರ್ಭದಲ್ಲಿ ಮಗು ಹೆಚ್ಚುವರಿ ಬೆರಳುಗಳೊಂದಿಗೆ ಜನಿಸಿದರೂ ಮುಂದೆ ಅದು ಯಾವುದೇ ರೋಗ-ಬೆಳವಣಿಗೆಗೆ ಕಾರಣವಾಗುವುದಿಲ್ಲ, ಹೀಗಾಗಿ ಇದು ತುಂಬಾ ಗಂಭೀರವಾಗಿ ಪರಿಗಣಿಸಬೇಕಾದ ಸಮಸ್ಯೆ ಅಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net