25 ದಿನಗಳನ್ನು ಪೂರೈಸಿದ 'ಬೇಬಿ'; ಹೊಸ ಸೀನ್ಸ್​ಗಳೊಂದಿಗೆ ವಿಶೇಷ ಪ್ರದರ್ಶನಕ್ಕೆ ಮುಂದಾದ ಚಿತ್ರತಂಡ

Untitled design - 2023-08-06T174422.012
Published on

ಆಂಧ್ರಪ್ರದೇಶ: ವಿಜಯ್​ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಮತ್ತು ನಟಿ ವೈಷ್ಣವಿ ಚೈತನ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಬೇಬಿ' ಚಿತ್ರ ಜುಲೈ 14 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಸತತ ಯಶಸ್ವಿ ಪ್ರದರ್ಶನಗಳನ್ನು ಕಂಡು, ಇದೀಗ 25 ದಿನಗಳನ್ನು ಪೂರೈಸುವ ಮೂಲಕ ಸಿನಿಪ್ರಿಯರ ಮನಗೆದ್ದಿದೆ.

ಬ್ಲಾಕ್‌ಬಸ್ಟರ್ ಹಿಟ್​ನತ್ತ ಸಾಗುತ್ತಿರುವ 'ಬೇಬಿ' ಚಿತ್ರಕ್ಕೆ ಸಿನಿಪ್ರೇಕ್ಷಕರಿಂದ ಮೊದಲ ದಿನದಿಂದಲೂ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಇದೀಗ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುವ ಮೂಲಕ ಪ್ರಾಬಲ್ಯ ಸಾಧಿಸಿದೆ. ಸಾಯಿ ರಾಜೇಶ್ ನಿರ್ದೇಶನದ ಈ ಚಿತ್ರದಲ್ಲಿ ವಿರಾಜ್ ಅಶ್ವಿನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರವು ಇದೀಗ 25ನೇ ದಿನಕ್ಕೆ ಕಾಲಿಟ್ಟ ಹಿನ್ನಲೆ ಚಿತ್ರತಂಡ ಈ ವಿಶೇಷ ದಿನವನ್ನು ಸಂಭ್ರಮಿಸಲು ವಿಭಿನ್ನವಾಗಿ ಯೋಚಿಸಿದೆ ಎನ್ನಲಾಗಿದೆ. ಸಿನಿಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಈ ಕುರಿತು ಮಾಹಿತಿ ನೀಡಿರುವ ಚಿತ್ರದ ತಯಾರಕರು, ಇಂದು (ಆಗಸ್ಟ್​ 06) ಸಂಜೆ 6 ಗಂಟೆಗೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಚಿತ್ರದ ಹೊಸ ದೃಶ್ಯಗಳು ಮತ್ತು ಒಂದು ಹಾಡನ್ನು ಒಳಗೊಂಡ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದೇವೆ ವೀಕ್ಷಿಸಿ ಎಂದು ಹೇಳಿದ್ದಾರೆ.

ಎಸ್‌ಕೆಎನ್ ನಿರ್ಮಾಣದ ಈ ಚಿತ್ರದಲ್ಲಿ ಆನಂದ್​ ದೇವರಕೊಂಡ, ವೈಷ್ಣವಿ ಚೈತನ್ಯ, ವಿರಾಜ್​ ಅಶ್ವಿನ್​, ಹರ್ಷ ಚೆಮುಡು, ನಾಗ ಬಾಬು, ಲಿರಿಶಾ, ಕುಸುಮಾ ದೇಗಲಮರ್ರಿ, ಸಾತ್ವಿಕ್ ಆನಂದ್, ಬಬ್ಲೂ ಮತ್ತು ಮುಂತಾದ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ವಿಜಯ್ ಬಲ್ಗಾನಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net