

ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಾಗ ರಾಜಕೀಯ ವಲಯದ ಗಮನ ಸೆಳೆಯುವಂಥ ಪ್ರಕರಣವೊಂದು ನಡೆದಿದ್ದು, ಸಾಕಷ್ಟು ಕುತೂಹಲಕ್ಕೂ ಕಾರಣವಾಗಿದೆ. ಮಾತ್ರವಲ್ಲ, ನಾಯಕರೊಬ್ಬರ ಪಕ್ಷಾಂತರದ ಸುಳಿವನ್ನು ಕೂಡ ನೀಡಿದೆ.
ಅದೇನೆಂದರೆ, ವಿಧಾನಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ಅವರು ಇಂದು ತಮ್ಮ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ.
ಮಾಜಿ ಶಾಸಕರಾಗಿರುವ, ಬಿಜೆಪಿಯ ನಾಯಕರೂ ಆಗಿರುವ ಬಾಬುರಾವ್ ಚಿಂಚನಸೂರ್ ಅವರು ರಾಜೀನಾಮೆ ನೀಡಲಿರುವ ಕುರಿತು ಕೆಲವು ದಿನಗಳಿಂದ ಮಾಹಿತಿ ಹರಿದಾಡುತ್ತಿದ್ದು, ಇಂದು ಅದಕ್ಕೆ ತೆರೆ ಬಿದ್ದಿದೆ. ಮಾತ್ರವಲ್ಲ, ಅವರ ಮುಂದಿನ ನಡೆ ಕುರಿತು ಕುತೂಹಲ ಕೂಡ ಮೂಡಿದೆ. ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು ಸದ್ಯದಲ್ಲೇ ಬಿಜೆಪಿಗೂ ವಿದಾಯ ಹೇಳಲಿದ್ದು, ಕಾಂಗ್ರೆಸ್ಗೆ ಸೇರಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.