ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ರಚಿಸಿಕೊಳ್ಳುವುದೀಗ ತುಂಬಾ ಸುಲಭ; ಇದೊಂದು ಆ್ಯಪ್ ಇದ್ದರಾಯ್ತು...

ABHA
Published on

ನವದೆಹಲಿ: ಆಯುಷ್ಮಾನ್ ಭಾರತ್​ ಆರೋಗ್ಯ ಖಾತೆ (ಎಬಿಎಚ್​ಎ)ಯನ್ನು ಈಗ ಸಾರ್ವಜನಿಕರು ಸ್ವತಃ ಹಾಗೂ ಸರಳವಾಗಿ ರಚಿಸಿಕೊಳ್ಳಬಹುದು. ಆ ಮೂಲಕ 14 ಅಂಕಿಗಳ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಸಂಖ್ಯೆಯನ್ನೂ ಸುಲಭದಲ್ಲಿ ಪಡೆಯಬಹುದು.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಆಯುಷ್ಮಾನ್ ಭಾರತ್​ ಡಿಜಿಟಲ್ ಮಿಷನ್​ ಯೋಜನೆಯಡಿ ಆರೋಗ್ಯ ಸೇತು ಆ್ಯಪ್​ ಕೂಡ ಸಂಯೋಜನೆಗೊಳಿಸಿದ್ದು, ಇದೀಗ ಆರೋಗ್ಯ ಸೇತು ಆ್ಯಪ್ ಇದ್ದರೆ ಆ ಮೂಲಕ ಆಯುಷ್ಮಾನ್ ಭಾರತ್​ ಆರೋಗ್ಯ ಖಾತೆ ನಂಬರ್ ಸುಲಭದಲ್ಲಿ ಪಡೆಯಬಹುದು.

ಈ ಖಾತೆ ನಂಬರ್ ಮೂಲಕ ವೈದ್ಯರ ಪ್ರಿಸ್ಕ್ರಿಪ್ಷನ್, ಪ್ರಯೋಗಾಲಯದ ವರದಿ, ಆಸ್ಪತ್ರೆ ದಾಖಲೆ ಮುಂತಾದವುಗಳನ್ನು ಡಿಜಿಟಲಿ ಸಂಗ್ರಹಿಸಿಡಬಹುದು. ಮಾತ್ರವಲ್ಲ, ನೋಂದಾಯಿತ ವೈದ್ಯಕೀಯ ಪರಿಣತರು, ಆರೋಗ್ಯ ಸೇವೆ ನೀಡುವವರು ಹಾಗೂ ಇತರ ಡಿಜಿಟಲ್ ಹೆಲ್ತ್ ಸರ್ವಿಸ್​ ಪ್ರೊವೈಡರ್ಸ್​ ಜತೆ ಈ ದಾಖಲೆಗಳನ್ನು ಸುಲಭವಾಗಿ ಹಂಚಿಕೊಂಡು ಪ್ರಯೋಜನ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net