ಶಾಲೆಯಲ್ಲೇ ನಮಾಜ್​!; ಹಿಜಾಬ್ ಬೆನ್ನಿಗೇ ಮತ್ತೊಂದು ವಿವಾದ?

1233722
Published on

ಮಂಗಳೂರು: ರಾಜ್ಯದಲ್ಲಿ ಹಿಜಾಬ್​ ಕುರಿತ ವಿವಾದ ತಾರಕಕ್ಕೇರಿರುವಾಗಲೇ ಮತ್ತೊಂದು ವಿವಾದ ತಲೆ ಎತ್ತುವ ಲಕ್ಷಣಗಳು ಗೋಚರಿಸಿವೆ. ಏಕೆಂದರೆ ಕೆಲವು ವಿದ್ಯಾರ್ಥಿಗಳು ಶಾಲೆಯಲ್ಲೇ ನಮಾಜ್ ಮಾಡಿದ್ದು, ಆ ವಿಡಿಯೋ ವೈರಲ್ ಆಗಲಾರಂಭಿಸಿದೆ.

ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಂಕತ್ತಡ್ಕ ಸರ್ಕಾರಿ ಶಾಲೆಯಲ್ಲಿ ನಮಾಜ್ ಪ್ರಕರಣ ನಡೆದಿದೆ. ಇಲ್ಲಿ 6-7ನೇ ತರಗತಿಯ ಐದು ಮಂದಿ ವಿದ್ಯಾರ್ಥಿಗಳು ನಮಾಜ್ ಮಾಡಿದ್ದು, ಇದೀಗ ಆ ಬಗ್ಗೆ ಆಕ್ಷೇಪ ವ್ಯಕ್ತವಾಗಲಾರಂಭಿಸಿದೆ.

ಕಳೆದ ಮೂರು ವಾರಗಳಿಂದ ಶಾಲಾ ಕೊಠಡಿಯಲ್ಲಿ ಈ ವಿದ್ಯಾರ್ಥಿಗಳು ನಮಾಜ್ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಶಾಲಾ ಸಿಬ್ಬಂದಿ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net