ವನ್ಯಜೀವಿಗಳಿಂದ ಪರಿಸರ ಸಮತೋಲನ

8 anr 2 forest
ಆಯನೂರು ವಿನಾಯಕ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿಯಲ್ಲಿ ವಲಯ ಅರಣ್ಯಾಧಿಕಾರಿ ಅರವಿಂದ್ ಮಾತನಾಡಿದರು. ಸುಕನ್ಯಾ, ಪ್ರಸನ್ನಕೃಷ್ಣ ಪಟಗಾರ್, ಸುರೇಶ್ ಇತರರಿದ್ದರು.
Published on

ಆಯನೂರು: ವನ್ಯಜೀವಿಗಳು ಮನುಷ್ಯನ ಅವಿಭಾಜ್ಯ ಅಂಗ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ವನ್ಯಜೀವಿಗಳು ಇದ್ದರೆ ಮಾತ್ರ ಪರಿಸರ ಸಮತೋಲನ ಸಾಧ್ಯ ಎಂದು ಡಿಎ್ಒ ಪ್ರಸನ್ನಕೃಷ್ಣ ಪಟಗಾರ್ ಹೇಳಿದರು.
ವಿನಾಯಕ ವೃತ್ತದಲ್ಲಿ 70ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ಆಯನೂರಿನಿಂದ ಮೂಗುಡ್ತಿವರೆಗೆ ಏರ್ಪಡಿಸಿದ್ದ ಬೈಕ್ ರ‌್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಕೋಹಳ್ಳಿ ಗ್ರಾಪಂ ಅಧ್ಯಕ್ಷೆ ಸುಕನ್ಯಾ, ಸಾರ್ವಜನಿಕರಲ್ಲಿ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಈ ಸಪ್ತಾಹ ಆಚರಿಸುತ್ತಿದ್ದೇವೆ. ವನ್ಯಜೀವಿಗಳು ಇದ್ದರೆ ಮಾತ್ರ ಕಾಡು ಭೂಮಿ ಇರಲು ಸಾಧ್ಯ ಎಂದರು.
ಆಯನೂರು ವಿನಾಯಕ ವೃತ್ತದಿಂದ ಆರಂಭವಾದ ಬೈಕ್ ರ‌್ಯಾಲಿ ಸಿರಿಗೆರೆ, ತಮ್ಮಡಿಹಳ್ಳಿ, ಮಂಡಘಟ್ಟ, ಚಿನ್ನಮನೆ, ಅರಸಾಳು, ಸೂಡೂರು, ರಿಪ್ಪನ್‌ಪೇಟೆ, ಬೆಳ್ಳೂರು ನಂತರ ಮೂಗುಡ್ತಿಯಲ್ಲಿ ಮುಕ್ತಾಯವಾಯಿತು. ರ‌್ಯಾಲಿಯಲ್ಲಿ ಎಸಿಎ್ ಸುರೇಶ್, ಸಿರಿಗೆರೆ ವಲಯ ಅರಣ್ಯಾಧಿಕಾರಿ ಅರವಿಂದ್, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net