ಆಕ್ಸಿಸ್ ಬ್ಯಾಂಕ್ ಷೇರುಗಳಿಂದ ಗಳಿಕೆಗೆ ಅವಕಾಶ: ತಜ್ಞರ ವಿವರಣೆ ಹೀಗಿದೆ…

axis-bank
Published on

ನವದೆಹಲಿ: ಆ್ಯಕ್ಸಿಸ್​ ಬ್ಯಾಂಕಿನ (Axis Bank) ಷೇರುಗಳ ಬೆಲೆ ಏರಿಕೆ ಕಾಣಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದ ಆಕ್ಸಿಸ್ ಬ್ಯಾಂಕ್‌ ಷೇರು ಖರೀದಿಸಲು ಸಲಹೆ ತಾಂತ್ರಿಕ ವಿಶ್ಲೇಷಕ ಮಿಲನ್ ವೈಷ್ಣವ್ ಸಲಹೆ ನೀಡಿದ್ದಾರೆ.

ಈ ಷೇರು ತಾಂತ್ರಿಕವಾಗಿ ಖರೀದಿ ಮತ್ತು ಏರುಗತಿಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ, ಈ ಷೇರುಗಳ ಬೆಲೆ ಮುಂಬರುವ ದಿನಗಳಲ್ಲಿ ಅಂದಾಜು ಶೇಕಡಾ 4.75 ಹೆಚ್ಚಳ ಕಾಣಬಹುದಾಗಿದೆ. ಹೀಗಾಗಿ, ಈ ಷೇರಿನಲ್ಲಿ ಬಾಜಿ ಕಟ್ಟಬಹುದು ಎಂಬುದು ಅವರ ಲೆಕ್ಕಾಚಾರ.

ಯಾವುದೇ ಹೂಡಿಕೆದಾರರು 1070 ರೂಪಾಯಿ ವ್ಯಾಪ್ತಿಯಲ್ಲಿ ಆಕ್ಸಿಸ್ ಬ್ಯಾಂಕ್ ಷೇರುಗಳನ್ನು ಖರೀದಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಸುರಕ್ಷತಾ ಕ್ರಮವಾಗಿ, ಈ ಸ್ಟಾಕ್‌ನಲ್ಲಿ 1050 ರೂಪಾಯಿಗೆ ನಷ್ಟದ ಗಡಿಯನ್ನು (ಸ್ಟಾಪ್ ಲಾಸ್​) ಹಾಕಿಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಈ ಷೇರು 1120 ರೂ.ಗೆ ತಲುಪಬಹುದು ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಆಕ್ಸಿಸ್ ಬ್ಯಾಂಕ್ ಸ್ಟಾಕ್ ಕುರಿತು ಮತ್ತಷ್ಟು ಕಾಮೆಂಟ್ ಮಾಡುತ್ತಾ, ದೈನಂದಿನ MACD (Moving Average Convergence/Divergence indicator) ಸಕಾರಾತ್ಮಕವಾಗಿದೆ ಎಂದು ತಜ್ಞರು ಹೇಳುತ್ತಾರೆ.

ಬುಧವಾರದ ವಹಿವಾಟಿನ ಮುಕ್ತಾಯದ ನಂತರ, ಆಕ್ಸಿಸ್ ಬ್ಯಾಂಕ್ ಷೇರುಗಳ ಬೆಲೆಯು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಎರಡು ಶೇಕಡಾಕ್ಕಿಂತ ಹೆಚ್ಚಿನ ಏರಿಕೆಯೊಂದಿಗೆ 1096 ರೂಪಾಯಿ ತಲುಪಿದೆ.

ಆಕ್ಸಿಸ್ ಬ್ಯಾಂಕ್ ಷೇರುಗಳ ಕಾರ್ಯಕ್ಷಮತೆಯನ್ನು ಗಮನಿಸಿದರೆ, ಕಳೆದ ಒಂದು ತಿಂಗಳಲ್ಲಿ ಷೇರುಗಳು ಶೇಕಡಾ ಎರಡಕ್ಕಿಂತ ಅಧಿಕ ಏರಿಕೆ ಕಂಡಿವೆ. ಒಂದು ತಿಂಗಳ ಆಧಾರದ ಮೇಲೆ, ಷೇರುಗಳಲ್ಲಿ ಶೇಕಡಾ 2ರಷ್ಟು ಕುಸಿತ ಕಂಡುಬಂದಿದೆ. ಇದನ್ನು ಹೊರತುಪಡಿಸಿ, ಕಳೆದ 3 ತಿಂಗಳುಗಳಲ್ಲಿ ಈ ಸ್ಟಾಕ್ ಸುಮಾರು 6 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಸ್ಟಾಕ್‌ನ 52 ವಾರದ ಗರಿಷ್ಠ ಬೆಲೆ 1151 ರೂ ಆಗಿದ್ದರೆ, ಕನಿಷ್ಠ ಬೆಲೆ 814 ರೂ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net