More

    ಕರಡಿಯ ಕುಣಿತ ತಡೆದು ಗುಟುರು ಹಾಕಿದ ಗೂಳಿ: ಬೆಳಗ್ಗೆ ಕುಸಿದ ಷೇರು ಸೂಚ್ಯಂಕ ಮಧ್ಯಾಹ್ನ ಚೇತರಿಕೆ ಕಂಡಿದ್ದೇಕೆ?

    ಮುಂಬೈ: ಬುಧವಾರದ ಆರಂಭಿಕ ವಹಿವಾಟಿನಲ್ಲಿ ಸಾಕಷ್ಟು ಹಿನ್ನಡೆ ಕಂಡಿದ್ದ ಭಾರತೀಯ ಷೇರು ಮಾರುಕಟ್ಟೆಯು, ಮಧ್ಯಾಹ್ನದ ನಂತರದ ವಹಿವಾಟಿನಲ್ಲಿ ಚೇತರಿಕೆ ಕಂಡಿತು. ಈ ಮೂಲಕ ಬಿಎಸ್​ಇ ಸೂಚ್ಯಂಕ 267 ಮತ್ತು ನಿಫ್ಟಿ ಸೂಚ್ಯಂಕ 96 ಅಂಕಗಳಷ್ಟು ಏರಿಕೆ ಕಂಡಿತು.

    ಜಾಗತಿಕ ಷೇರುಗಳಲ್ಲಿನ ಮಿಶ್ರ ಪ್ರವೃತ್ತಿಯ ನಡುವೆಯೇ ಇಂಧನ, ಲೋಹ ಮತ್ತು ಉಪಯುಕ್ತತೆಯ ಷೇರುಗಳಲ್ಲಿನ ಕೊನೆ ಕ್ಷಣದಲ್ಲಿನ ಖರೀದಿಯ ಪರಿಣಾಮವಾಗಿ ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಬಿಎಸ್​ಇ ಮತ್ತು ನಿಫ್ಟಿ ಬುಧವಾರ ಚೇತರಿಕೆ ಕಂಡವು.

    ಬುಧವಾರದಂದು ಸತತ ಎರಡನೇ ಸೂಚ್ಯಂಕ ಏರಿಕೆಯಾಯಿತು. 30-ಷೇರು ಬಿಎಸ್‌ಇ ಸೂಚ್ಯಂಕ 267.64 ಅಂಕಗಳು ಅಥವಾ 0.37 ರಷ್ಟು ಏರಿಕೆಯಾಗಿ 71,822.83 ಅಂಕಗಳಿಗೆ ತಲುಪಿತು. ಇಂಟ್ರಾ-ಡೇ ವಹಿವಾಟಿನಲ್ಲಿ ಈ ಸೂಚ್ಯಂಕವು ಗರಿಷ್ಠ 71,938.59 ಮತ್ತು ಕನಿಷ್ಠ 70,809.84 ಅಂಕಗಳನ್ನು ಮುಟ್ಟಿತ್ತು. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕ ಕೂಡ 96.80 ಅಂಕಗಳು ಅಥವಾ ಶೇಕಡಾ 0.45ರಷ್ಟು ಗಳಿಸಿ 21,840.05 ಅಂಕಗಳಿಗೆ ತಲುಪಿತು.

    ಸೂಚ್ಯಂಕ ಷೇರುಗಳ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳ ಬೆಲೆ ಬುಧವಾರ ಅತಿ ಹೆಚ್ಚು ಲಾಭ ಗಳಿಸಿ, ಶೇಕಡಾ 4.24 ರಷ್ಟು ಏರಿಕೆಯಾಯಿತು. ಟಾಟಾ ಸ್ಟೀಲ್, ಆಕ್ಸಿಸ್ ಬ್ಯಾಂಕ್, ಮಾರುತಿ, ಎನ್‌ಟಿಪಿಸಿ, ಪವರ್‌ಗ್ರಿಡ್, ಐಟಿಸಿ ಮತ್ತು ನೆಸ್ಲೆ ಇಂಡಿಯಾ ನಂತರದ ಸ್ಥಾನದಲ್ಲಿವೆ. ರಿಲಯನ್ಸ್ ಷೇರು 1.15 ಪ್ರತಿಶತದಷ್ಟು ಜಿಗಿದು ಬಿಎಸ್‌ಇಯಲ್ಲಿ ರೂ 2,962.60 ಕ್ಕೆ ತಲುಪಿತು. ಇದಕ್ಕೆ ವ್ಯತಿರಿಕ್ತವಾಗಿ, ಟೆಕ್ ಮಹೀಂದ್ರಾ, ಸನ್ ಫಾರ್ಮಾ, ಟಿಸಿಎಸ್, ಇನ್ಫೋಸಿಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಹಿನ್ನಡೆ ಅನುಭವಿಸಿದವು.

    ಏಷ್ಯಾ ಮಾರುಕಟ್ಟೆಯಲ್ಲಿ, ಜಪಾನ್‌ನ ನಿಕ್ಕಿ 225 ಹಿನ್ನಡೆ ಕಂಡರೆ, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕಗಳು ಏರಿಕೆ ದಾಖಲಿಸಿದವು. ಚಂದ್ರಮಾನ ಹೊಸ ವರ್ಷದ ರಜಾದಿನಗಳಿಗಾಗಿ ಚೀನಾದ ಹಣಕಾಸು ಮಾರುಕಟ್ಟೆಗಳಿಗೆ ರಜೆ ಇತ್ತು. ಆರಂಭಿಕ ವಹಿವಾಟಿನಲ್ಲಿ ಐರೋಪ್ಯ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಪ್ರವೃತ್ತಿ ಇತ್ತು. ಮಂಗಳವಾರ ರಾತ್ರಿಯ ವಹಿವಾಟಿನಲ್ಲಿ ಅಮೆರಿಕ ಮಾರುಕಟ್ಟೆ ಗಮನಾರ್ಹ ನಷ್ಟ ಕಂಡವು.

    ಮಂಗಳವಾರದಂದು ಬಿಎಸ್​ಇ ಸೂಚ್ಯಂಕ 482.70 ಅಂಕಗಳ ಏರಿಕೆಯಾಗಿ 71,555.19 ಅಂಕಗಳಿಗೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 127.20 ಅಂಕಗಳ ಏರಿಕೆ ಕಂಡು 21,743.25 ಅಂಕಗಳಿಗೆ ತಲುಪಿತ್ತು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಖರೀದಿದಾರರಾಗಿದ್ದಾರೆ, ಅವರು 376.32 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

    ರಸ್ತೆ ನಿರ್ಮಾಣ ಕಂಪನಿ ಷೇರು ಒಂದೇ ದಿನದಲ್ಲಿ 20% ಏರಿಕೆ: ಅಪ್ಪರ್ ಸರ್ಕ್ಯೂಟ್ ಹಿಟ್​ ಹಿಂದಿದೆ ಪ್ರಮುಖ ಕಾರಣ

    ಕೇವಲ 3 ರೂಪಾಯಿಯ ಷೇರು ಖರೀದಿಸಿದರೆ 20 ರೂಪಾಯಿಯ ಲಾಭಾಂಶ!! ಈ ಪೆನ್ನಿ ಸ್ಟಾಕ್​ ಕಂಪನಿ ಯಾವುದು ಗೊತ್ತೆ?

    ಕೇವಲ ಮೂರೇ ವರ್ಷಗಳಲ್ಲಿ 6060% ಲಾಭ ನೀಡಿದ ಷೇರು: ಮರ್ಚೆಂಟ್ ಬ್ಯಾಂಕ್​ ಸ್ಥಾಪನೆಗೆ ಅನುಮೋದನೆ ನೀಡುತ್ತಿದ್ದಂತೆಯೇ ಸ್ಟಾಕ್​ಗೆ ಭಾರಿ ಡಿಮ್ಯಾಂಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts