More

    ಕೇವಲ ಮೂರೇ ವರ್ಷಗಳಲ್ಲಿ 6060% ಲಾಭ ನೀಡಿದ ಷೇರು: ಮರ್ಚೆಂಟ್ ಬ್ಯಾಂಕ್​ ಸ್ಥಾಪನೆಗೆ ಅನುಮೋದನೆ ನೀಡುತ್ತಿದ್ದಂತೆಯೇ ಸ್ಟಾಕ್​ಗೆ ಭಾರಿ ಡಿಮ್ಯಾಂಡು

    ಮುಂಬೈ: ಕಳೆದ 3 ವರ್ಷಗಳಲ್ಲಿ, ಸ್ಟ್ಯಾಂಡರ್ಡ್ ಕ್ಯಾಪಿಟಲ್ ಮಾರ್ಕೆಟ್ ಲಿಮಿಟೆಡ್​ (Standard Capital Markets Ltd) ಷೇರುಗಳು ಹೂಡಿಕೆದಾರರಿಗೆ 6060 ಪ್ರತಿಶತದಷ್ಟು ಅದ್ಭುತ ಲಾಭವನ್ನು ನೀಡಿವೆ. ಕಳೆದ 5 ವರ್ಷಗಳಲ್ಲಿ ಈ ಷೇರುಗಳು ಹೂಡಿಕೆದಾರರಿಗೆ 6821 ಶೇಕಡಾಕ್ಕಿಂತ ಹೆಚ್ಚಿನ ಆದಾಯವನ್ನು ನೀಡಿವೆ.

    ಸ್ಟಾಂಡರ್ಡ್ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಷೇರುಗಳ ಬೆಲೆ ಬುಧವಾರದ ವಹಿವಾಟಿನಲ್ಲಿ ಶೇಕಡಾ 3.77 ರಷ್ಟು ಏರಿಕೆ ದಾಖಲಿಸಿದ್ದು, 2.75 ರೂಪಾಯಿಗೆ ತಲುಪಿದೆ.

    ಈ ಕಂಪನಿಯು ಅಂದಾಜು 398 ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಈ ಕಂಪನಿಯ ಷೇರು ಕಳೆದ ಒಂದು ವಾರದಲ್ಲಿ ಹೂಡಿಕೆದಾರರಿಗೆ ಶೇಕಡಾ ನಾಲ್ಕು, ಕಳೆದ ಮೂರು ತಿಂಗಳಲ್ಲಿ ಶೇಕಡಾ 49 ಮತ್ತು ಕಳೆದ ಒಂದು ವರ್ಷದಲ್ಲಿ ಶೇಕಡಾ 189 ರಷ್ಟು ಆದಾಯವನ್ನು ನೀಡಿದೆ.

    ಕಳೆದ 3 ವರ್ಷಗಳಲ್ಲಿ, ಸ್ಟ್ಯಾಂಡರ್ಡ್ ಕ್ಯಾಪಿಟಲ್ ಮಾರ್ಕೆಟ್ ಷೇರುಗಳು ಹೂಡಿಕೆದಾರರಿಗೆ 6060 ಪ್ರತಿಶತದಷ್ಟು ಲಾಭವನ್ನು ನೀಡಿದರೆ, ಕಳೆದ 5 ವರ್ಷಗಳಲ್ಲಿ, ಸ್ಟ್ಯಾಂಡರ್ಡ್ ಕ್ಯಾಪಿಟಲ್ ಮಾರ್ಕೆಟ್ ಷೇರುಗಳು ಹೂಡಿಕೆದಾರರಿಗೆ 6821 ಶೇಕಡಾಕ್ಕಿಂತ ಹೆಚ್ಚಿನ ಆದಾಯವನ್ನು ನೀಡಿವೆ. ಮಾರ್ಚ್ 22, 2019 ರಂದು, ಸ್ಟಾಂಡರ್ಡ್ ಕ್ಯಾಪಿಟಲ್ ಮಾರ್ಕೆಟ್‌ನ ಷೇರುಗಳ ಬೆಲೆ ನಾಲ್ಕು ಪೈಸೆ ಮಟ್ಟದಲ್ಲಿ ಇತ್ತು.

    ಫೆಬ್ರವರಿ 13, ಮಂಗಳವಾರದಂದು ನಿರ್ದೇಶಕರ ಮಂಡಳಿ ಸಭೆ ನಡೆದಿದ್ದು, ಇದರಲ್ಲಿ ಸ್ಟಾಂಡರ್ಡ್ ಕ್ಯಾಪಿಟಲ್ ಮಾರ್ಕೆಟ್ಸ್ ಸ್ಟಾಂಡರ್ಡ್ ಕ್ಯಾಪಿಟಲ್ ಅಡ್ವೈಸರ್ಸ್ ಲಿಮಿಟೆಡ್ ಎಂಬ ಅಂಗಸಂಸ್ಥೆ ರಚನೆಗೆ ಅನುಮೋದನೆಯನ್ನು ನೀಡಲಾಗಿದೆ ಎಂದು ಕಂಪನಿಯು ಷೇರು ಮಾರುಕಟ್ಟೆಗೆ ತಿಳಿಸಿದೆ. ಆಕಾಶ್ ಭಾಟಿಯಾ ಅವರನ್ನು ಸ್ಟ್ಯಾಂಡರ್ಡ್ ಕ್ಯಾಪಿಟಲ್ ಮಾರ್ಕೆಟ್‌ನ ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಿಸಲು ಕೂಡ ಅನುಮೋದಿಸಿದೆ. ಸ್ಟ್ಯಾಂಡರ್ಡ್ ಕ್ಯಾಪಿಟಲ್‌ನ ಈ ಹೊಸ ಕಂಪನಿಯು ಮರ್ಚೆಂಟ್ ಬ್ಯಾಂಕಿಂಗ್ ಕೆಲಸವನ್ನು ಮಾಡಲಿದೆ.

    ಸ್ಟಾಂಡರ್ಡ್ ಕ್ಯಾಪಿಟಲ್ ಮಾರ್ಕೆಟ್ಸ್ ಷೇರುಗಳ ವಿಭಜನೆ ಮತ್ತು ಬೋನಸ್ ವಿತರಣೆಗೆ ಡಿಸೆಂಬರ್ 29 ಅನ್ನು ದಾಖಲೆಯ ದಿನಾಂಕವಾಗಿ ನಿಗದಿಪಡಿಸಲಾಗಿತ್ತು. 10 ರೂ. ಮುಖಬೆಲೆಯ ಷೇರುಗಳು ಈಗ 1 ರೂ. ಮುಖಬೆಲೆಯ 10 ಷೇರುಗಳಾಗಿ ಪರಿವರ್ತನೆಯಾಗಿವೆ ಎಂದು ಸ್ಟ್ಯಾಂಡರ್ಡ್ ಕ್ಯಾಪಿಟಲ್ ಮಾರ್ಕೆಟ್ ಹೇಳಿದೆ. ಇದಲ್ಲದೆ, ಸ್ಟಾಂಡರ್ಡ್ ಕ್ಯಾಪಿಟಲ್‌ನ ಒಂದು ಈಕ್ವಿಟಿ ಷೇರಿಗೆ, ಎರಡು ಈಕ್ವಿಟಿ ಷೇರುಗಳನ್ನು ಬೋನಸ್ ಷೇರುಗಳನ್ನು ಕೂಡ ನೀಡಲಾಗಿದೆ.

    ಅದಾನಿ ಗ್ರೀನ್ ಎನರ್ಜಿ ಷೇರುಗಳಿಗೆ ಭರ್ಜರಿ ಬೇಡಿಕೆ: ಇದರ ಹಿಂದಿರುವ 2 ಪ್ರಮುಖ ಕಾರಣಗಳ ಕುರಿತ ವಿವರ ಇಲ್ಲಿದೆ…

    ಸ್ಮಾಲ್​ ಕ್ಯಾಪ್​ ಕಂಪನಿ ನೀಡಲಿದೆ ಬೋನಸ್​ ಷೇರು: ಹೀಗೆಂದು ಘೋಷಣೆ ಮಾಡುತ್ತಿದ್ದಂತೆಯೇ ಷೇರಿಗೆ ಭರ್ಜರಿ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts