More

    ರಸ್ತೆ ನಿರ್ಮಾಣ ಕಂಪನಿ ಷೇರು ಒಂದೇ ದಿನದಲ್ಲಿ 20% ಏರಿಕೆ: ಅಪ್ಪರ್ ಸರ್ಕ್ಯೂಟ್ ಹಿಟ್​ ಹಿಂದಿದೆ ಪ್ರಮುಖ ಕಾರಣ

    ಮುಂಬೈ: ರಸ್ತೆ ನಿರ್ಮಾಣ ಕಂಪನಿಯಾದ ದಿಲೀಪ್ ಬಿಲ್ಡ್‌ಕಾನ್ ಲಿಮಿಟೆಡ್​ (Dilip Buildcon Ltd,) ಷೇರುಗಳ ಬೆಲೆ ಫೆಬ್ರವರಿ 14 ರ ಬುಧವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಅಪ್ಪರ್​ ಸರ್ಕ್ಯೂಟ್​ ತಲುಪಿತು. ಈ ಷೇರು ಬೆಲೆ 20% ರಷ್ಟು ಏರಿಕೆ ಕಂಡು, 460.50 ರೂ.ಗೆ ತಲುಪಿತು. ಇದು ಈ ಷೇರಿನ 52 ವಾರಗಳ ಹೊಸ ಗರಿಷ್ಠ ಬೆಲೆ ಕೂಡ ಆಗಿದೆ.

    ಕಂಪನಿಯ ಷೇರುಗಳ ಈ ಏರಿಕೆಯ ಹಿಂದೆ ದೊಡ್ಡ ಘೋಷಣೆ ಇದೆ. ಈ ಕಂಪನಿಯು ಗೋವಾದಲ್ಲಿ 545.4 ಕೋಟಿ ರೂ. ಮೌಲ್ಯದ ಸೇತುವೆಯ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಘೋಷಿಸಿದೆ.

    ಗೋವಾದ ಪಂಜಿಂ ಮಂಗಳೂರು ವಿಭಾಗದಲ್ಲಿ NH-17/NH-66 ರಲ್ಲಿ ಜುವಾರಿ ನದಿಯನ್ನು ದಾಟುವ ಸೇತುವೆಯನ್ನು ದುರಸ್ತಿ ಮಾಡಲಾಗಿದೆ ಎಂದು ಭೋಪಾಲ್ ಮೂಲದ ಕಂಪನಿಯು ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಮಾಹಿತಿ ನೀಡಿದೆ.

    ಇಂಜಿನಿಯರಿಂಗ್, ಪ್ರೊಕ್ಯೂರ್‌ಮೆಂಟ್ ಮತ್ತು ಕನ್‌ಸ್ಟ್ರಕ್ಷನ್ (ಇಪಿಸಿ) ಮೋಡ್‌ನಲ್ಲಿ ಕಂಪನಿಯು ರೂ 545.4 ಕೋಟಿ ಮೌಲ್ಯದ ಈ ಕಾಮಗಾರಿಯ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಕಂಪನಿಗೆ ಏಪ್ರಿಲ್ 11ರ 2016 ರಲ್ಲಿ ಈ ಕಾಮಗಾರಿ ಆದೇಶ ದೊರಕಿತ್ತು. ಈ ಯೋಜನೆಯನ್ನು 2021 ರೊಳಗೆ ಪೂರ್ಣಗೊಳ್ಳಬೇಕಿತ್ತು. ಆದಾಗ್ಯೂ, ಕೋವಿಡ್​ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ವಿಳಂಬದಿಂದಾಗಿತ್ತು. ನಂತರ ಕಾಮಗಾರಿ ಪೂರ್ಣಗೊಳಿಸುವ ಸಮಯವನ್ನು ಪರಿಷ್ಕರಿಸಿ, ಆಗಸ್ಟ್ 31, 2023 ಕ್ಕೆ ನಿಗದಿಪಡಿಸಲಾಗಿತ್ತು.

    ದಿಲೀಪ್ ಬಿಲ್ಡ್‌ಕಾನ್ ಕಂಪನಿಯು ಈ ಹಣಕಾಸು ವರ್ಷದಲ್ಲಿ ಇದುವರೆಗೆ ಗುಜರಾತ್, ಕರ್ನಾಟಕ, ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ರೂ. 2,495.4 ಕೋಟಿ ಮೌಲ್ಯದ ನಾಲ್ಕು ಯೋಜನೆಗಳನ್ನು ಪೂರ್ಣಗೊಳಿಸಿದೆ. ಅಲ್ಲದೆ, 570.
    ಕೋಟಿ ರೂ. ಮೊತ್ತದ ಇಪಿಸಿ ಯೋಜನೆಯನ್ನು ಪೂರ್ಣಗೊಳಿಸಿದೆ. ಕಂಪನಿಯು ರೂ. 2,641.3 ಕೋಟಿ ಮೌಲ್ಯದ ನಾಲ್ಕು ಯೋಜನೆಗಳ ಗುತ್ತಿಗೆಯನ್ನು ಪಡೆದುಕೊಂಡಿದೆ. ದಿಲೀಪ್ ಬಿಲ್ಡ್‌ಕಾನ್ ಡಿಸೆಂಬರ್​ ತ್ರೈಮಾಸಿಕದಲ್ಲಿ (Q3FY24) ರೂ. 2,571 ಕೋಟಿ ಆದಾಯದ ಗಳಿಸಿದ್ದು, ಇದು 8% ಬೆಳವಣಿಗೆಯಾಗಿದೆ. ತೆರಿಗೆಯ ನಂತರದ ಲಾಭವು Q3FY23 ರಲ್ಲಿ 79.5 ಕೋಟಿ ರೂಪಾಯಿಗೆ ಹೋಲಿಸಿದರೆ Q3FY24 ರಲ್ಲಿ 95.3 ಕೋಟಿ ರೂಪಾಯಿಗೆ ಏರಿದೆ. ಇದು 19.87% ಹೆಚ್ಚಳವಾಗಿದೆ.

    ಕೇವಲ 3 ರೂಪಾಯಿಯ ಷೇರು ಖರೀದಿಸಿದರೆ 20 ರೂಪಾಯಿಯ ಲಾಭಾಂಶ!! ಈ ಪೆನ್ನಿ ಸ್ಟಾಕ್​ ಕಂಪನಿ ಯಾವುದು ಗೊತ್ತೆ?

    ಕೇವಲ ಮೂರೇ ವರ್ಷಗಳಲ್ಲಿ 6060% ಲಾಭ ನೀಡಿದ ಷೇರು: ಮರ್ಚೆಂಟ್ ಬ್ಯಾಂಕ್​ ಸ್ಥಾಪನೆಗೆ ಅನುಮೋದನೆ ನೀಡುತ್ತಿದ್ದಂತೆಯೇ ಸ್ಟಾಕ್​ಗೆ ಭಾರಿ ಡಿಮ್ಯಾಂಡು

    ಸ್ಮಾಲ್​ ಕ್ಯಾಪ್​ ಕಂಪನಿ ನೀಡಲಿದೆ ಬೋನಸ್​ ಷೇರು: ಹೀಗೆಂದು ಘೋಷಣೆ ಮಾಡುತ್ತಿದ್ದಂತೆಯೇ ಷೇರಿಗೆ ಭರ್ಜರಿ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts