

ಕಾರ್ಕಳ: ಭಾರತೀಯ ಜೆಸಿಐ ವಲಯ ಹದಿನೈದರ ನೇತೃತ್ವದಲ್ಲಿ ವಿಟ್ಲದಲ್ಲಿ ಭಾನುವಾರ ಜರುಗಿದ ವಲಯದ ಮಧ್ಯಂತರ ಸಮ್ಮೇಳನ ‘ತುಂತುರು’ದಲ್ಲಿ ಸರಿತಾ ದಿನೇಶ್ ಸುವರ್ಣ ಸಾರಥ್ಯದ ಜೆಸಿಐ ಬೆಳ್ಮಣ್ ಘಟಕಕ್ಕೆ ಅತ್ಯುತ್ತಮ ಘಟಕಾಧ್ಯಕ್ಷ ವಿನ್ನರ್, ಅತ್ಯುತ್ತಮ ಘಟಕ ರನ್ನರ್, ಡೈಮಂಡ್ ಘಟಕ, ಪ್ರಶಸ್ತಿ ಸೇರಿ ಗೋಗ್ರೀನ್, ಪ್ರೇರಣಾ ತರಬೇತಿ, ಯುವ ರತ್ನ, ರಜತ ಸಿಂಚನ, ಕ್ಲೀನ್ ಪ್ಲೇಟ್ ವಿಶೇಷ ಮನ್ನಣೆಗಳನ್ನು ವಲಯಾಧ್ಯಕ್ಷ ಗಿರೀಶ್ ಎಸ್.ಪಿ. ನೀಡಿ ಗೌರವಿಸಿದರು.
ವಲಯ ಉಪಾಧ್ಯಕ್ಷ ರಾಕೇಶ್ ಹೊಸಬೆಟ್ಟು, ವಲಯಾಧಿಕಾರಿ ಸತಿಶ್ ಪೂಜಾರಿ ಅಬ್ಬನಡ್ಕ, ಬೆಳ್ಮಣ್ ಜೆಸಿಐ ಘಟಕ ಪೂರ್ವಾಧ್ಯಕ್ಷ ಸುಧಾಕರ್ ಆಚಾರ್ಯ, ದಿನೇಶ್ ಸುವರ್ಣ, ಸುಭಾಸ್ ಕುಮಾರ್, ಸಂದೀಪ್ ವಿ.ಪೂಜಾರಿ ಅಬ್ಬನಡ್ಕ, ಪ್ರದೀಪ್ ಆಚಾರ್ಯ, ಶ್ವೇತಾ ಸುಭಾಷ್, ಉಪಾಧ್ಯಕ್ಷ ರಘು ಕುಲಾಲ್, ಅವಿನಾಶ್ ಪೂಜಾರಿ, ಅಮಿತಾ ಶೆಟ್ಟಿ, ಕಾರ್ಯದರ್ಶಿ ಸೌಜನ್ಯಾ ಕೋಟ್ಯಾನ್, ಕೋಶಾಧಿಕಾರಿ ವೀಣಾ ರವಿ ಆಚಾರ್ಯ, ನಿದೇರ್ಶಕ ರಾಜೇಶ್ ಕುಲಾಲ್, ಯುವ ಜೇಸಿ ಅಧ್ಯಕ್ಷೆ ಪೂರ್ವಿ ರಾವ್, ಮಹಿಳಾ ಜೇಸಿ ಸಂಯೋಜಕಿ ಶ್ವೇತಾ ಆಚಾರ್ಯ, ಸದಸ್ಯರಾದ ಮಾಯಾ ರಾವ್, ಪದ್ಮಶ್ರೀ ಪೂಜಾರಿ, ಕೀರ್ತನ್ ಪೂಜಾರಿ, ಅನ್ನಪೂರ್ಣ ಕಾಮತ್, ಅರ್ಚನಾ, ಸುಚಿತ್ರಾ ಮೂಲ್ಯ ಉಪಸ್ಥಿತರಿದ್ದರು.