ಸ್ಮಾರ್ಟ್ ವಾಚ್ ಅಲ್ಲೇ ಕ್ಯೂ ಆರ್ ಕೋಡ್ ಬಂದಿದ್ಯಂತೆ!

sw
Published on

ಸಿಲಿಕಾನ್​ ಸಿಟಿ ಬೆಂಗಳೂರನ್ನ ಐಟಿ ಸಿಟಿ, ಗಾರ್ಡನ್​ ಸಿಟಿ ಹೀಗೆ ಸಾಕಷ್ಟು ಹೆಸರಿನಿಂದ ಕರೆಯಲಾಗುತ್ತೆ. ವಿಶೇಷ ಅಂದ್ರೆ ಬೆಂಗಳೂರಿನ ಐಟಿ ಉದ್ಯಮಿಗಳಿಂದ ಹಿಡಿದು ಇದೀಗ ಆಟೋ ಚಾಲಕರೂ ಸ್ಮಾರ್ಟ್​ ಆಗ್ಬಿಟ್ಟಿದ್ದಾರೆ. ಅದಕ್ಕೆ ಉದಾಹರಣೆಯಾಗಿ ಇಲ್ಲೊಂದು ಘಟನೆ ನಡೆದಿದೆ.
ಈಗಂತೂ ಸಾಮಾನ್ಯವಾಗಿ ಹಾರ್ಡ್​ ಕ್ಯಾಶ್​ಗಳಿಗಿಂತ, ಫೋನ್​ ಪೇ, ಗೋಗಲ್​ ಪೇಗೆ ಅವಲಂಬಿತರಾಗಿರುತ್ತಾರೆ. ಟೆಕ್ನಾಲಜಿ ಅಷ್ಟರ ಮಟ್ಟಿಗೆ ಡೆವೆಲಪ್​ ಆಗಿದೆ.


ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರವು ಆಟೋ ಪ್ರಯಾಣಿಕರೊಬ್ಬರು ಚಾಲಕನ ಸ್ಮಾರ್ಟ್ ವಾಚ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಹಣ ಪಾವತಿಸುತ್ತಿರುವುದನ್ನು ತೋರಿಸುತ್ತದೆ.


ಬೆಳೆಯುತ್ತಿರುವ ಜಗತ್ತಿನಲ್ಲಿ ಕೇವಲ ಫೋನ್​ ಪೇಯಲ್ಲಿ ಕ್ಯೂಆರ್​ ಕೋಡ್​ ಮಾತ್ರವಲ್ಲದೇ, ಸ್ಮಾರ್ಟ್ ವಾಚ್ ಅಲ್ಲೇ ಕ್ಯೂ ಆರ್ ಕೋಡ್ ಬಂದಿದ್ಯಂತೆ! ಎಸ್​, ಸಿಲಿಕಾನ್ ಸಿಟಿ ಸಾರಥಿಗಳೀಗ ಫುಲ್ ಸ್ಮಾರ್ಟ್ ಗಳಲ್ಲಿ ನಿಪುಣರಾಗ್ತಾ ಇದ್ದಾರೆ.


ಪ್ರಯಾಣಿಕರರೊಬ್ಬರು ನಮ್ಮ ಯಾತ್ರಿ ಆಪ್‌ನಲ್ಲಿ ಆಟೋ ಬುಕ್ ಮಾಡಿ ಪ್ರಯಾಣ ಮಾಡಿದ್ದಾರೆ. ತಮ್ಮ ಸ್ಥಳ ಬಂದ ಬಳಿಕ ಇಳಿಯುವ ಮುನ್ನ ಹಣ ಪಾವತಿಸಲು ಕ್ಯುಆರ್ ಕೋಡ್ ಕೇಳಿದ್ದಾರೆ.ಆಟೋ ಡ್ರೈವರ್ ತುಂಬಾ ಸರಳವಾಗಿ ತನ್ನ ಸ್ಮಾರ್ಟ್ ವಾಚ್ ತೋರಿಸಿದ್ದು,. ಪ್ರಯಾಣಿಕ ಒಂದು ಕ್ಷಣ ಶಾಕ್ ಆಗಿದ್ದಾರೆ. ಸಾಮಾನ್ಯವಾಗಿ, ಜನರು ಕ್ಯೂಆರ್ ಕೋಡ್ ಹೊಂದಿರುವ ಲ್ಯಾಮಿನೇಟೆಡ್ ಕಾಗದವನ್ನು ಅಂಟಿಸಿರುತ್ತಾರೆ.


ಆದರೆ ಈ ಆಟೋ ಡ್ರೈವರ್​​, ತನ್ನ ಸ್ಮಾರ್ಟ್​ ವಾಚ್​ನಲ್ಲಿ ಕ್ಯೂ ಆರ್​ ಕೋಡ್​ ತೋರಿಸಿ ಪೇಮೆಂಟ್ ಮಾಡುವಂತೆ ಹೇಳಿದ್ದಾನೆ.
ಈ ಬಗ್ಗೆ ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿ ಸಂತಸ ವ್ಯಕ್ತ ಪಡಿಸಿದ್ದಾರೆ ನನ್ನ ಆಟೋ ಡ್ರೈವರ್‌ಗೆ ಕ್ಯೂಆರ್ ಕೋಡ್ ಕೇಳಿದೆ. ಆತ ತನ್ನ ಕೈಯನ್ನು ತಿರುಗಿಸಿ ಸ್ಮಾರ್ಟ್ ವಾಚ್ ಅನ್ನು ನೇರವಾಗಿ ನನಗೆ ತೋರಿಸ್ತಾರೆ.


QR ಕೋಡ್ ಅನ್ನು ತನ್ನ ಸ್ಮಾರ್ಟ್ ವಾಚ್ ಸ್ಕ್ರೀನ್‌ಸೇವರ್ ಆಗಿ ಉಳಿಸಿಕೊಂಡಿದ್ದಾರೆ. ಈ ಟ್ವೀಟ್ ಗೆ ಸಾಕಷ್ಟು ಕಾಮೆಂಟ್ಸ್ ಬಂದಿದ್ದು ಬೆಂಗಳೂರಿನಲ್ಲಿ ಮಾತ್ರ ಇವೆಲ್ಲ ಸಾಧ್ಯ ಅಂತ ವ್ಯಕ್ತಿಯೋರ್ವ ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net