

Apologizes: ಇತ್ತೀಚಿಗೆ ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರಿಗೆ ಮಹಿಳೆ ಚಪ್ಪಲಿಯಿಂದ ಹೊಡೆದ ಘಟನೆ ಸಂಬಂಧಿಸಿದಂತೆ ಆ ಮಹಿಳೆ ಚಾಲಕನಿಗೆ ಕ್ಷಮೆಯಾಚಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈಗ ಅದು ವೈರಲ್ ಆಗಿದೆ.
ಘಟನೆ ಏನು..?
ಬೆಂಗಳೂರಿನ ಬೆಳ್ಳಂದೂರು ವೃತ್ತದಲ್ಲಿ ಈ ಘಟನೆ ನಡೆದಿದೆ. ಸ್ಕೂಟಿಗೆ ಆಟೋ ಟಚ್ ಆಗುತ್ತೆಂದು ಆಟೋ ಚಾಲಕ ಮತ್ತು ಯುವತಿ ನಡುವೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಆಟೋ ಚಾಲಕನಿಗೆ ಯುವತಿ ಚಪ್ಪಲಿಯಿಂದ ಹೊಡೆದಿದ್ದಾಳೆ. ಯುವತಿ ಚೆಪ್ಪಲಿಯಿಂದ ಹೊಡೆಯುವ ವಿಡಿಯೋ ಆಟೋ ಚಾಲಕನ ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ. ಈ ಘಟನೆಯನ್ನು ಗಮನಿಸಿದ ಪೊಲೀಸರು ಈ ಪ್ರಕರಣದಲ್ಲಿ ಆಕೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಬಿಹಾರ ಮೂಲದ ಫಂಕೂರಿ ಮಿಶ್ರಾ ಆರೋಪಿತ ಮಹಿಳೆ.
ಇದನ್ನೂ ಓದಿ:30 ಕೋಟಿ ರೂ. ಲಾಟ್ರಿ ಗೆದ್ದು ಗೆಳತಿಗೆ ನೀಡಿದ ಪ್ರಿಯಕರ: ಆಕೆ ಕೊಟ್ಟ ಶಾಕ್ಗೆ ಬೆಚ್ಚಿಬಿದ್ದ ಗೆಳೆಯ! | Lottery ಕ್ಷಮೆಯಾಚಿಸುವ ವಿಡಿಯೋ ವೈರಲ್! ಆಸ್ಪತ್ರೆಗೆ ತೆರಳಿ ವಾಪಸ್ ಬರುತ್ತಿದ್ದೆ. ಆಗ ನನ್ನ ದ್ವಿಚಕ್ರ ವಾಹನಕ್ಕೆ ಆಟೋ ತಗುಲಿತ್ತು. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಚಾಲಕ ಸರಿಯಾಗಿ ವರ್ತಿಸಲಿಲ್ಲ. ಹೀಗಾಗಿ ಕೋಪದಲ್ಲಿ ಚಪ್ಪಲಿಯಲ್ಲಿ ಹೊಡೆದಿದ್ದೇನೆ ಎಂದು ಮಹಿಳೆ ವಿಚಾರಣೆ ವೇಳೆ ತಿಳಿಸಿದ್ದಾರೆ. ದಂಪತಿ ಇಬ್ಬರು ಆಟೋ ಚಾಲಕನಿಗೆ ಕ್ಷಮೆ ಕೇಳಿದ್ದು, ಕಾಲಿಗೆ ಬಿದ್ದು, ತಮ್ಮನ್ನು ಕ್ಷಮಿಸುವಂತೆ ಕೇಳಿಕೊಂಡಿದ್ದಾರೆ. ಎಲ್ಲಾ ಕನ್ನಡಿಗರಿಗೂ ಕ್ಷಮೆ ಕೇಳುತ್ತೇವೆ. ಇನ್ನೊಂದು ಸಲ ಈ ರೀತಿ ಮಾಡಲ್ಲವೆಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.