ಶಶಾಂಕ್ ಸಿಂಗ್​ಗೆ ಹಿಗ್ಗಾಮುಗ್ಗಾ ಬೈದಾ ಶ್ರೇಯಸ್ ಅಯ್ಯರ್!; ವಿಡಿಯೋ ವೈರಲ್ | IPL 2025​

dk - 2025-06-02T072526.602
Published on

IPL 2025​: ಶ್ರೇಯಸ್ ಅಯ್ಯರ್ ಅವರ 41 ಎಸೆತಗಳಲ್ಲಿ ಅಜೇಯ 87 ರನ್‌ಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಭಾನುವಾರ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ಜೂನ್​​.3ರಂದು ನಡೆಯುವ ಫೈನಲ್​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸೆಣಸಲಿದೆ.

ಆದರೆ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಮುಗಿದ ನಂತರ ನಾಯಕ ಅಯ್ಯರ್ ಅತೃಪ್ತರಾಗಿದ್ದರು. ನಿರ್ಣಾಯಕ ಆಟಗಾರ ಶಶಾಂಕ್ ಸಿಂಗ್ ರನ್ ಔಟ್ ಆದ ನಂತರ ನಾಯಕ ಶಶಾಂಕ್ ಸಿಂಗ್ ಅವರ ಬಾಯಿಗೆ ಬಂದಂತೆ ಬೈಯುತ್ತಿದ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬೈಯಲು ಕಾರಣವೇನು..? ಅಶ್ವನಿ ಕುಮಾರ್ ಬೌಲಿಂಗ್‌ನಲ್ಲಿ ಶ್ರೇಯಸ್ ಅಯ್ಯರ್ ಗೆಲುವಿನ ಸಿಕ್ಸರ್ ಬಾರಿಸಿದ ನಂತರ, ಇಡೀ ಪಂಜಾಬ್ ಕಿಂಗ್ಸ್ ಆಟಗಾರರು ನಾಯಕನನ್ನು ಅಪ್ಪಿಕೊಂಡು ಸಂಭ್ರಮಿಸುತ್ತಿದ್ದರು.ಆದರೆ, ಶಶಾಂಕ್ ಸಿಂಗ್ ಶ್ರೇಯಸ್ ಅಯ್ಯರ್ ಬಳಿಗೆ ಬಂದಾಗ, ಅಯ್ಯರ್ ಶಶಾಂಕ್​ಗೆ ಅವಾಚ್ಯ ಶಬ್ದಗಳಿಂದ ಬೈದು, ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಶಶಾಂಕ್ ನಾನ್-ಸ್ಟ್ರೈಕರ್‌ನ ಎಸೆತವನ್ನು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ. ಅಲ್ಲದೆ ಹಾರ್ದಿಕ್ ಪಾಂಡ್ಯ ಕ್ರಿಸ್​ಗೆ ಎಸೆದ ಬಾಲ್​ಗೆ ಔಟ್​ ಆಗಿದ್ದರು.ಹೀಗಾಗಿ, ಶಶಾಂಕ್ ಕಡೆಗೆ ಬೆರಳುಗಳನ್ನು ತೋರಿಸಿದರು ತಮ್ಮ ಅಸಮಾಧಾನವನ್ನು ತೋರಿಸಿರುವ ವಿಡಿಯೋ ವೈರಲ್​ ಆಗಿದೆ.

ರನ್ ಔಟ್ ಯಾವಾಗ ಆಯಿತು?

17 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕೇವಲ 2 ರನ್‌ಗಳಿಗೆ ರನೌಟ್ ಆದ ನಂತರ ಶಶಾಂಕ್ ಸಿಂಗ್ ಡಗೌಟ್‌ಗೆ ಹಿಂತಿರುಗಿದರು. ಟ್ರೆಂಟ್ ಬೌಲ್ಟ್ ಬೌಲಿಂಗ್‌ನಲ್ಲಿ ಶಶಾಂಕ್ ಸಿಂಗ್ ಮಿಡ್-ಆನ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಲೋ ಫುಲ್-ಟಾಸ್ ವೈಡ್ ಅನ್ನು ಹೊಡೆದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net