ಭಾರತೀಯ ಆಹಾರ ಕೊಳಕು ಮಸಾಲೆಗಳಿಂದ ಕೂಡಿದೆ; ಯುಟ್ಯೂಬರ್​ಗೆ ಚಳಿ ಬಿಡಿಸಿದ ನೆಟ್ಟಿಗರು

Untitled-design-2024-09-18T193248.285
Published on

ನವದೆಹಲಿ: ಜನರು ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಾರೆ. ಅದು ಒಳ್ಳೆಯದಿರಲಿ ಅಥವಾ ಕೆಟ್ಟದ್ದೆ ಇರಲಿ ಬಹಿರಂಗವಾಗಿ ಚರ್ಚಿಸುತ್ತಾರೆ. ಇಂಥದ್ದೆ ಒಂದು ಕಾಮೆಂಟ್​​ ಸದ್ಯ ಜಾಲತಾಣದಲ್ಲಿ ವಾದ-ವಿವಾದಕ್ಕೆ ದಾರಿ ಮಾಡಿದೆ. ಅಷ್ಟಕ್ಕೂ ಈ ವಾರ್​ಗೆ ಕಾರಣವಾಗಿದ್ದು ಆಸ್ಟ್ರೇಲಿಯಾದ ಯೂಟ್ಯೂಬರ್ ಟ್ವಿಟರ್‌ನಲ್ಲಿ ಮಾಡಿರುವ ಪೋಸ್ಟ್ ಆಗಿದೆ. ಆಕೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಭಾರತೀಯ ಆಹಾರಪದ್ಧತಿಯನ್ನು ಟೀಕಿಸಿದ್ದಾಳೆ.

ಅಸಲಿಗೆ ಜೆಫ್ ಎಂಬ ವ್ಯಕ್ತಿ ಭಾರತೀಯ ಆಹಾರವನ್ನು ಶ್ಲಾಘಿಸುವ ಪೋಸ್ಟ್ ಅನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಜತೆಗೆ ಭಾರತೀಯ ಆಹಾರವು ಭೂಮಿಯ ಮೇಲೆ ಅತ್ಯುತ್ತಮವಾಗಿದೆ. ನನ್ನ ವಿರುದ್ಧ ಹೋರಾಡಿ ಎಂದು ಬರೆದುಕೊಂಡಿದ್ದಾರೆ. ಅದರಲ್ಲಿ ಭಾರತೀಯ 3 ಬಗೆಯ ಕರಿ, ರೈಸ್​​ ಇರುವುದನ್ನು ಕಾಣಬಹುದು. ಜೆಫ್ ಅವರ ಈ ಪೋಸ್ಟ್ ಕೆಲವೇ ಸಮಯದಲ್ಲಿ ವೈರಲ್ ಆಗಿದ್ದು, ಸುಮಾರು ಒಂದು ಕೋಟಿ ಜನ ಇದನ್ನು ನೋಡಿದ್ದು, 55 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

ಜೆಫ್​ ಮಾಡಿರುವ ಈ ಪೋಸ್ಟ್​ಗೆ ಇದು ವಿಶ್ವದ ಅತ್ಯುತ್ತಮ ಆಹಾರವಲ್ಲ. ಇದರಲ್ಲಿ ಉಪ್ಪು, ಕಾಳುಮೆಣಸು, ದಾಲ್ಚಿನ್ನಿ ಬಿಟ್ಟರೆ ಉಳಿದೆಲ್ಲವೂ ಕೊಳಕು ಮಸಾಲೆಗಳು ಎಂದು ಡಾ. ಸಿಡ್ನಿ ವ್ಯಾಟ್ಸನ್ ಕಾಮೆಂಟ್​ ಮಾಡಿದ್ದಾರೆ. ಈ ಕಾಮೆಂಟ್​​ ವೈರಲ್​ ಆಗುತ್ತಿದ್ದಂತೆ ಭಾರತೀಯ ಆಹಾರ ಪ್ರಿಯರನ್ನು ಕೆರಳಿಸಿದೆ. 

ಡಾ.ಸಿಡ್ನಿ ವ್ಯಾಟ್ಸನ್ ವಿವಾದಾತ್ಮಕ ಹೇಳಿಕೆಗೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಇದು ಆಸ್ಟ್ರೇಲಿಯ ಆಹಾರಕ್ಕಿಂತ ಖಂಡಿತವಾಗಿಯೂ ಉತ್ತಮವಾಗಿದೆ. ಕಾಂಗರೂ ಮಾಂಸದೊಂದಿಗೆ ಶುಂಠಿಯ ರುಚಿ ಬಲ್ಲ ಕೋತಿ. ಸಿಡ್ನಿಯ ಬಾಯಿಯಲ್ಲಿ ರುಚಿ ಮೊಗ್ಗುಗಳಿಲ್ಲ ಆದ್ದರಿಂದ ಅವಳನ್ನು ದೂಷಿಸಬೇಡಿ. ನೀವು ಬೇಯಿಸಿದ ಆಲೂಗಡ್ಡೆ ತಿನ್ನಲು ಮಾತ್ರ ಯೋಗ್ಯರು, ನಾವು ನಮ್ಮ ಟೇಸ್ಟಿ ಆಹಾರವನ್ನು ತಿನ್ನುತ್ತೇವೆ.

ಭಾರತದಲ್ಲಿ ನೀವು 5 ಸಾವಿರ ರೀತಿಯ ಭಕ್ಷ್ಯಗಳನ್ನು ಪಡೆಯುತ್ತೀರಿ ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ನಿಮಗೆ 10 ಸಿಗುವುದಿಲ್ಲ. ಈ ಕೊಳಕು ಮಸಾಲೆಗಳು ಜಗತ್ತಿಗೆ ಅನೇಕ ರುಚಿಕರವಾದ ಭಕ್ಷ್ಯಗಳನ್ನು ನೀಡಿವೆ. ಭಾರತದಲ್ಲಿನ ಈ ಮಸಾಲೆಗಳ ವ್ಯಾಪಾರದ ಮೇಲೆ ಹಿಡಿತ ಸಾಧಿಸಲು ಯುರೋಪಿಯನ್ ದೇಶಗಳು ಹೋರಾಡುತ್ತಿದ್ದವು. ಭಾರತೀಯ ಆಹಾರವು ಸಂಸ್ಕೃತಿ, ಸಂಪ್ರದಾಯ ಮತ್ತು ಪ್ರೀತಿಯ ಆಚರಣೆಯಾಗಿದೆ. ನಿಮಗೆ ಇಷ್ಟವಾಗದಿದ್ದರೆ ನಷ್ಟ ನಿಮಗೇ ಎಂದು ಕಾಮೆಂಟ್​ ಮಾಡಿದ್ದಾರೆ.

ಭಾರತೀಯ ಪಾಕಪದ್ಧತಿಯು ಜಾಗತಿಕವಾಗಿ ತನ್ನ ಛಾಪು ಮೂಡಿಸುವುದನ್ನು ಮುಂದುವರಿಸಿದೆ. ಈ ವರ್ಷ ಟೆಸ್ಟ್ ಅಟ್ಲಾಸ್‌ನ ವಿಶ್ವದ 100 ಅತ್ಯುತ್ತಮ ಭಕ್ಷ್ಯಗಳ ಪ್ರತಿಷ್ಠಿತ ಪಟ್ಟಿಯಲ್ಲಿ ಭಾರತದ ನಾಲ್ಕು ಭಕ್ಷ್ಯಗಳು ಕಾಣಿಸಿಕೊಂಡಿವೆ. ಮುಂಚೂಣಿಯಲ್ಲಿದ್ದು ಅತ್ಯಂತ ಜನಪ್ರಿಯವಾದ ಬೆಣ್ಣೆ ಬೆಳ್ಳುಳ್ಳಿ ನಾನ್, ಇದು 7ನೇ ಸ್ಥಾನವನ್ನು ಪಡೆದುಕೊಂಡಿದೆ. ಮುರ್ಘ್ ಮಖಾನಿ (ಬಟರ್ ಚಿಕನ್)-43, ಟಿಕ್ಕಿ-47 ಮತ್ತು ತಂದೂರಿ ಚಿಕನ್-48 ಸ್ಥಾನವನ್ನು ಪಡೆದಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net