ಡಿಸಿ ಕಚೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

crime
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಅಂಗವಿಕಲ ವ್ಯಕ್ತಿಯೊಬ್ಬರು ನಗರಜಿಲ್ಲಾಧಿಕಾರಿ ಕಚೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿದ ಘಟನೆ ಸಂಭವಿಸಿದೆ. ಇದರಿಂದಾಗಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.
ಅಣವೀರಪ್ಪ ಗೌಡಗಾಂವ ಆತ್ಮಹತ್ಯೆ ಯತ್ನಿಸಿದ ಅಂಗವಿಕಲ. ಸುದೈವದಿಂದ  ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಅಫಜಲಪುರ ತಾಲೂಕಿನ ಉಡಚಣ ಗ್ರಾಮ ಪಂಚಾಯತಿಯಲ್ಲಿ  ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಎಂದು  ಗೌರವ ಧನ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು.
ಅಣವೀರಪ್ಪ ಅವರಿಗೆ ಕೆಲವರು ನಿರಂತರವಾಗಿ ನೀಡುತ್ತಿದ್ದ ಕಿರುಕುಳ ನೀಡುತ್ತಿದ್ದರಿಂದ ಹಾಗೂ ಕೆಲಸದಿಂದ ತೆಗೆಸುವ ಪ್ರಯತ್ನ ನಡೆಸಿದ್ದರಿಂದ ಬೇಸತ್ತು ಈ ಕೃತ್ಯಕ್ಕೆ ಕೈಹಾಕಿದರು ಎನ್ನಲಾಗಿದೆ. ಕೆಲವರು ಆರ್‌ಟಿಐ ಅರ್ಜಿ ಹಾಕಿ ತೊಂದರೆ ನೀಡಿದರೆ, ಕೆಲ ವ್ಯಕ್ತಿಗಳು ಪತ್ರಕರ್ತರು ಹೇಳಿ  ಇಲ್ಲದ ಮಾಹಿತಿ ಕೇಳಿ, ಸಾಮಾಜಿಕ ಜಾಲತಾಣ ಹಾಕುತ್ತೇವೆ ಎಂದು ಬೆದರಿಸುತ್ತಿರುವುದರಿಂದ ವಿಷ ಸೇವಿಸಿದ್ದಾರೆ ಎಂದು ದೂರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಣವೀರಪ್ಪನನ್ನು ನೌಕರಿಯಿಂದ ತಗೆಸಲು ಕೆಲವರು ನಿರಂತರ ಯತ್ನ ಮಾಡುತ್ತಿದ್ದರಿಂದ ಕಂಗೆಟ್ಟು ವಿಷ ಸೇವಿಸಿದ್ದಾರೆ ಎನ್ನಲಾಗಿದೆ.  ವಿಷ ಸೇವಿಸಿದ್ದ ವ್ಯಕ್ತಿಯನ್ನು  ಜತೆಗಿದ್ದವರು ಹಾಗೂ ಸ್ಥಳದಲ್ಲಿದ್ದ ಪೊಲೀಸರು  ಜಿಮ್ಸï ಆಸ್ಪತ್ರೆಗೆ ದಾಖಲಿಸಿದರು. ಈ ಕುರಿತು ಸ್ಟೇಷನ್ ಬಜಾರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net