ಲಾಡ್ಜ್​ ಮೇಲೆ ಯುವಕರ ದಾಳಿ: ಅನ್ಯ ಕೋಮಿನ ಜೋಡಿಗೆ ಹಿಗ್ಗಾಮುಗ್ಗ ಥಳಿತ!

crime
Published on

ಹಾವೇರಿ: ಮೂಡಿಗೆರೆ ಬಸ್​ ನಿಲ್ದಾಣದಲ್ಲಿ ಯುವತಿ ಜತೆ ಮಾತನಾಡುತ್ತಿದ್ದುದಕ್ಕೆ ಅನ್ಯ ಕೋಮಿನ ಯುವಕರ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಹಾನಗಲ್​ನಲ್ಲೂ ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ. ಆದರೆ ಇಲ್ಲಿ ಅನೈತಿಕ ಚಟುವಟಿಕೆಯಲ್ಲಿ ನಿರತರಾಗಿದ್ದ ಅನ್ಯ ಕೋಮಿನ ಜೋಡಿಗೆ ಯುವಕರ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ.

ಹಾನಗಲ್ಲನಲ್ಲಿ ಲಾಡ್ಜ್ ವೊಂದರ ಮೇಲೆ ದಾಳಿ‌ ಮಾಡಿದ ನಾಲ್ಕೈದು ಯುವಕರ ಗುಂಪು ರೂಮ್ ನಲ್ಲಿದ್ದ ವ್ಯಕ್ತಿ ಹಾಗೂ ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿದೆ.

ಬುರ್ಖಾ ಧರಿಸಿದ್ದ ಮಹಿಳೆ ಜತೆಗೆ ವ್ಯಕ್ತಿಯೊಬ್ಬ ಲಾಡ್ಜ್ ಗೆ ತೆರಳಿದ್ದ. ಈ ಬಗ್ಗೆ ತಿಳಿದ ಯುವಕರು ಲಾಡ್ಜ್ ಗೆ ತೆರಳಿ ಹಲ್ಲೆ ಮಾಡಿದ್ದಾರೆ. ನಮ್ಮ ಹುಡುಗಿಯೇ ಬೇಕಾ ನಿನಗೆ ಎಂದು ವ್ಯಕ್ತಿ ಮೇಲೆ ಮುಗಿಬಿದ್ದಿದ್ದಾರೆ.

ಬಳಿಕ ಇಬ್ಬರನ್ನೂ ಹೊರಗಡೆ ಎಳೆದು ಬಂದು ಮನಬಂದಂತೆ ಥಳಿಸಿದ್ದಾರೆ. ಜ.8ರಂದು ಈ ಘಟನೆ ನಡೆದಿದ್ದು, ಯುವಕರು ಈ ಘಟನೆಯ ವಿಡಿಯೊ ಮಾಡಿಕೊಂಡಿದ್ದರು.

ಸದ್ಯ ಹಾನಗಲ್ಲ ಠಾಣೆಯಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net