ರೇಖಾ ಗುಪ್ತಾ ಮೇಲೆ ದಾಳಿ: ನಾನು ಆಘಾತಕ್ಕೊಳಗಾಗಿ... ಘಟನೆ ಬಗ್ಗೆ ಮೌನ ಮುರಿದ ಡೆಲ್ಲಿ CM

photo-54-68a5d584db694
Published on

Delhi CM : ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಹಲ್ಲೆ ನಡೆದಿರುವ ಘಟನೆಗೆ ಸಬಂಧಿಸಿದಂತೆ ಇದೀಗ ಡೆಲ್ಲಿ ಸಿಎಂ ರೇಖಾ ಗುಪ್ತಾ ಮೊದಲ ಬಾರಿಗೆ ಮಾತನಾಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಸಿಎಂ ರೇಖಾ, ''ಇದು ನನ್ನ ಮೇಲೆ ಮಾತ್ರ ನಡೆದ ದಾಳಿಯಲ್ಲ. ಸಾರ್ವಜನಿಕ ಸಮಸ್ಯೆಗಳ ಪರಿಹರಿಸುವ ಅವರ ಬದ್ಧತೆಯ ಮೇಲಿನ ಹೇಡಿತನದ ಪ್ರಯತ್ನವಾಗಿದೆ'' ಎಂದಿದ್ದಾರೆ.

"ಇಂದು ಬೆಳಿಗ್ಗೆ ಜನಸಂಪರ್ಕ ಸಮಯದಲ್ಲಿ ನನ್ನ ಮೇಲೆ ನಡೆದ ದಾಳಿ ನನ್ನ ಮೇಲೆ ಮಾತ್ರವಲ್ಲ, ದೆಹಲಿ ಮತ್ತು ಜನರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲಿನ ಹೇಡಿತನದ ಪಯತ್ನವಾಗಿದೆ. ಸ್ವಾಭಾವಿಕವಾಗಿ ಈ ದಾಳಿಯ ನಂತರ ನಾನು ಅಘಾತಕ್ಕೊಳಗಾಗಿದ್ದೆ. ಆದ್ರೆ ನಾನು ಇದೀಗ ಉತ್ತಮವಾಗಿದ್ದೇನೆ. ನನ್ನ ಎಲ್ಲಾ ಹಿತೈಷಿಗಳು ದಯವಿಟ್ಟು ನನ್ನ ಭೇಟಿಯಾಗಲು ತೆಲೆಕೇಡಿಸಿಕೊಳ್ಳಬೇಡಿ ಎಂದು ನಾನು ವಿನಂತಿಸುತ್ತೇನೆ. ನಾನು ಶೀಘ್ರದಲ್ಲಿಯೇ ನಿಮ್ಮೊಂದಿಗೆ ಕೆಲಸ ಮಾಡುತ್ತೇನೆ'' ಎಂದು ಬರೆದಿದ್ದಾರೆ.

''ಇಂತಹ ದಾಳಿಗಳು ನನ್ನ ಚೈತನ್ಯ ಮತ್ತು ಸಾರ್ವಜನಿಕ ಸೇವೆ ಮಾಡುವ ಸಂಕಲ್ಪವನ್ನು ಎಂದಿಗೂ ಮುರಿಯಲು ಸಾಧ್ಯವಿಲ್ಲ. ಈಗ ನಾನು ಹಿಂದೆಂದಿಗಿಂತಲೂ ಹೆಚ್ಚು ಶಕ್ತಿ ಮತ್ತು ಸಮರ್ಪಣೆಯೊಂದಿಗೆ ನಿಮ್ಮೊಂದಿಗೆ ಇರುತ್ತೇನೆ. ಸಾರ್ವಜನಿಕ ಸಮಸ್ಯೆಗಳ ವಿಚಾರಣೆ ಮತ್ತು ಪರಿಹಾರವು ಮೊದಲಿನಂತೆಯೇ ಗಂಭೀರತೆ ಮತ್ತು ಬದ್ಧತೆಯೊಂದಿಗೆ ಮುಂದುವರಿಯುತ್ತದೆ. ನಿಮ್ಮ ನಂಬಿಕೆ ಮತ್ತು ಬೆಂಬಲ ನನ್ನ ದೊಡ್ಡ ಶಕ್ತಿ. ನಿಮ್ಮ ಅಪಾರ ಪ್ರೀತಿ, ಆಶೀರ್ವಾದ ಮತ್ತು ಶುಭ ಹಾರೈಕೆಗಳಿಗೆ ನಾನು ನನ್ನ ಹೃತ್ತೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ" ಎಂದು ಮುಖ್ಯಮಂತ್ರಿ ಬರೆದಿದ್ದಾರೆ.

ಸಿಎಂ ಮೇಲೆ 35 ವರ್ಷದ ವ್ಯಕ್ತಿ ದಾಳಿ ನಡೆಸಿದ್ದು, ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯನ್ನು ರಾಜೇಶ್ ಭಾಯ್ ಖಿಮ್ಜಿ ಭಾಯ್ ಸಕರಿಯಾ ಎಂದು ಗುರುತಿಸಲಾಗಿದೆ. ಈತ ರಾಜ್​ಕೋಟ್​ ನಿವಾಸಿ. ಆತನ ಉದ್ದೇಶ ಏನಿತ್ತು ಎಂದು ತಿಳಿಯಲು ವಿವರವಾದ ವಿಚಾರಣೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net