

ಹಳೆಯಂಗಡಿ: ಪಡುಪಣಂಬೂರು ಗ್ರಾಪಂ ವ್ಯಾಪ್ತಿಗೆ ಸೇರಿದ ಪಡುತೋಟ ಮೀನುಗಾರಿಕಾ ರಸ್ತೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ನಿಂತು ಹೊಂಡ ಗುಂಡಿಗಳಿಂದ ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಪಡುಪಣಂಬೂರು ಒಳಪೇಟೆಯ ಅರಮನೆಯ ಎದುರು ಭಾಗದಿಂದ ಮೂಲ್ಕಿ ಚಿತ್ರಾಪು ಗಡಿ ಭಾಗ ಸಂಪರ್ಕಿಸುವ ಮೀನುಗಾರಿಕಾ ರಸ್ತೆಗೆ ವರ್ಷಗಳ ಹಿಂದೆ ಕಾಂಕ್ರೀಟ್ ಹಾಕಿದ್ದು ಭಾರಿ ಮಳೆಗೆ ಅಲ್ಲಲ್ಲಿ ಹೊಂಡ ಉಂಟಾಗಿ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಈ ಬಗ್ಗೆ ಅನೇಕ ಬಾರಿ ಗ್ರಾಮಸಭೆಯಲ್ಲಿ, ಮೀನುಗಾರಿಕಾ ಇಲಾಖೆಗೆ ತಿಳಿಸಿದ್ದರೂ ದುರಸ್ತಿ ಬಗ್ಗೆ ಇಲಾಖೆ ನಿರ್ಲಕ್ಷೃ ವಹಿಸಿದೆ ಎಂದು ಸ್ಥಳೀಯ ಗ್ರಾಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ರಸ್ತೆ ನಾದುರಸ್ತಿಯಲ್ಲಿದ್ದರೂ, ಭಾರಿ ಮಳೆಗೆ ಮರದ ಕೊಂಬೆ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡರೂ ಇನ್ನೂ ಕೊಂಬೆ ರಸ್ತೆಯಿಂದ ತೆರವಾಗದಿರುವುದು ಅಪಾಯಕಾರಿಯಾಗಿ ಪರಿಣಮಿಸಿದೆ. ಜನರಿಗೆ ಬಹು ಅಗತ್ಯವಾಗಿರುವ ರಸ್ತೆ ಬಗ್ಗೆ ಇಲಾಖೆ ನಿರ್ಲಕ್ಷೃ ವಹಿಸುವುದು ಅಕ್ಷಮ್ಯ, ಕೂಡಲೇ ಮೀನುಗಾರಿಕಾ ಇಲಾಖೆ ಎಚ್ಚೆತ್ತು ರಸ್ತೆಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಶಾಶ್ವತ ನೆಲೆಯಲ್ಲಿ ದುರಸ್ತಿಪಡಿಸಬೇಕು. ಸೋಮಶೇಖರ್ ಜೋಕಟ್ಟೆ ಗ್ರಾಮಸ್ಥ https://www.vijayavani.net/private-buses-to-stop-at-devarakkatte-steps-taken-to-avoid-traffic-jam-problem https://www.vijayavani.net/bharata-natya