ಷೇರುಪೇಟೆಯಲ್ಲಿ ಮುಂದುವರೆದ ಗೂಳಿ ಓಟ: 5 ದಿನಗಳಲ್ಲಿ 1,600 ಪಾಯಿಂಟ್ಸ್​​ ಏರಿಕೆ ಕಂಡ ಸೆನ್ಸೆಕ್ಸ್​

photo-53-68a5c39834046
Published on

ಮುಂಬೈ: ದೀಪಾವಳಿ ಹೊತ್ತಿಗೆ ಜಿಎಸ್‌ಟಿ ಪರಿಷ್ಕರಣೆ ಮತ್ತು ಜೀವನಾವಶ್ಯಕ ವಸ್ತುಗಳ ಮೇಲಿನ ಜಿಎಸ್‌ಟಿ ಇಳಿಕೆಯ ಬಗ್ಗೆ ಮುನ್ಸೂಚನೆ ಸಿಗುತ್ತಿದ್ದಂತೆ ಷೇರುಪೇಟೆಯಲ್ಲಿ ಉತ್ಸಾಹ ಕಂಡುಬಂದಿದೆ.

ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 50 ತಮ್ಮ ಗೆಲುವಿನ ಓಟವನ್ನು ವಾರದ ವಹಿವಾಟಿನ ಮೂರನೇ ದಿನವಾದ ಬುಧವಾರ ಕೂಡ ಮುಂದುವರಿಸಿವೆ. ಆರಂಭದಿಂದಲೂ ನೀರಸ ಪ್ರದರ್ಶನ ತೋರುತ್ತಿದ್ದ ಸೂಚ್ಯಂಕಗಳು, ಅಸ್ಥಿರತೆಯ ನಡುವೆಯೂ ಐಟಿ ಮತ್ತು ಎಫ್‌ಎಂಸಿಜಿ ಷೇರುಗಳ ಬಲವಾದ ಖರೀದಿಯಿಂದ ಉತ್ತಮ ಚೇತರಿಕೆ ಕಂಡಿವೆ.

ಬಿಎಸ್‌ಇ ಸೆನ್ಸೆಕ್ಸ್ 213.45 ಪಾಯಿಂಟ್‌ಗಳು(ಶೇ.0.26) ಏರಿಕೆಯಾಗಿ 81,857.84 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 50 69.90 ಪಾಯಿಂಟ್‌ಗಳು (ಶೇ.0.28) ಏರಿಕೆಯಾಗಿ 25,050.55 ಕ್ಕೆ ತಲುಪಿದೆ.

ಸೆನ್ಸೆಕ್ಸ್‌ನಲ್ಲಿ ಇನ್ಫೋಸಿಸ್ ಷೇರುಗಳು ಶೇ.3.88 ರಷ್ಟು ಏರಿಕೆಯಾಗಿ ರೂ.1,495.85 ಕ್ಕೆ ತಲುಪಿ ಪ್ರಮುಖ ಲಾಭ ಗಳಿಸಿದವು. ಟಿಸಿಎಸ್ ಶೇ.2.69 ರಷ್ಟು ಏರಿಕೆ ಕಂಡರೆ, ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಶೇ.2.46 ರಷ್ಟು ಏರಿಕೆ ಕಂಡರೆ, ಎನ್‌ಟಿಪಿಸಿ ಷೇರುಗಳು ಶೇ.2.10 ರಷ್ಟು ಏರಿಕೆ ಕಂಡರೆ, ಟಾಟಾ ಸ್ಟೀಲ್ ಷೇರುಗಳು ಶೇ.1.79 ರಷ್ಟು ಏರಿಕೆ ಕಂಡರೆ, ಟೆಕ್ ಮಹೀಂದ್ರ ಷೇರುಗಳು ಶೇ.1.76 ರಷ್ಟು ಏರಿಕೆ ಕಂಡಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net