ಬೆಳಗಾವಿ ಕಂಡಕ್ಟರ್ ಮೇಲೆ ಹಲ್ಲೆ; ಪಕ್ಷಾತೀತವಾಗಿ ಎಲ್ಲರೂ ಖಂಡಿಸಬೇಕು|Condemn impartially

Ramalingareddy
Published on

ಬೆಂಗಳೂರು: ಬೆಳಗಾವಿ ಕಂಡೆಕ್ಟರ್ ಮೇಲೆ ಹಲ್ಲೆ ಪ್ರಕರಣದಲ್ಲಿ ಎಂಟತ್ತು ಜನ ಪುಂಡಾಟಿಕೆ ಮಾಡಿದ್ದು, ಅವರನ್ನು ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ(Attack on Belgaum conductor; All should condemn impartially) ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ(Ramalinga Reddy) ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ಏನೂ ಎಂದು ಸ್ಪಷ್ಟಪಡಿಸಿದರು.

ನಮ್ಮ ಕಂಡೆಕ್ಟರ್‌ಗೆ ಮರಾಠಿ ಬರುವುದಿಲ್ಲ. ಅವರಿಗೆ ಕನ್ನಡ ಬರುತ್ತಿಲ್ಲ. ಆ ವೇಳೆ ಹಲ್ಲೆಯಾಗಿದೆ. ಹಲ್ಲೆ ಮಾಡಿ ಪುಂಡಾಟಿಕೆ ಮಾಡಿದವರನ್ನು ಗಡಿಪಾರು ಮಾಡಬೇಕು. ಕಂಡೆಕ್ಟರ್ ಮೇಲೆ ಫೋಕ್ಸೋ ಕೇಸ್ ಏನೂ ಇಲ್ಲ. ಬೇಕು ಅಂತಲೇ ಕೆಲವು ಬಾರಿ ಈ ರೀತಿ ದೂರು ಕೊಡುತ್ತಾರೆ. ಅಂತಹದ್ದೇನೂ ನಡೆದಿಲ್ಲ. ಇಂತಹ ಘಟನೆಗಳನ್ನು ಪಕ್ಷಾತೀತವಾಗಿ ಎಲ್ಲರೂ ಖಂಡಿಸಬೇಕು ಎಂದರು.

ಗ್ರೇಟರ್ ಬೆಂಗಳೂರು ವಿಚಾರದಲ್ಲಿ ನಾನು ಸಮಿತಿಯ ಸದಸ್ಯನಾಗಿಲ್ಲ. ರಿಜ್ವಾನ್ ಅರ್ಷದ್ ನಮ್ಮನ್ನೂ ಸಭೆಗೆ ಕರೆದಿದ್ದರು. ನಮ್ಮ ಅಭಿಪ್ರಾಯಗಳನ್ನೂ ಪಡೆದಿದ್ದಾರೆ.

ಬಿಜೆಪಿಯವರಿಗೆ ಗದ್ದಲ ಮಾಡೋದೇ ಕೆಲಸ. ಅವರು ಕೆಲಸ ಮಾಡುವುದನ್ನೇ ಮರೆತಿದ್ದಾರೆ. ಮಹಾನಗರಪಾಲಿಕೆಯಲ್ಲಿ 1 ಕೋಟಿಗೂ ಹೆಚ್ಚು ಮತದಾರರಿದ್ದಾರೆ. 6 ಸಾವಿರ ಕೋಟಿ ಸಾಲ ಅವರ ಅವಧಿಯಲ್ಲಿತ್ತು. 14 ಕಟ್ಟಡಗಳನ್ನು ಬಿಜೆಪಿಯವರು ಅಡ ಇಟ್ಟಿದ್ದರು. ಗಾರ್ಡನ್ ಸಿಟಿಗೆ ಗಾರ್ಬೇಜ್ ಸಿಟಿ ಅಂತ ಹೆಸರು ತಂದಿದ್ದು ಅವರು. ನಾವು ಬಂದ ಮೇಲೆ ರಸ್ತೆ ಅಭಿವೃದ್ಧಿ ಮಾಡಿದ್ದೇವೆ. ಎಲ್ಲ ರಸ್ತೆಗೆ ಡಾಂಬರೀಕರಣ ಮಾಡಿದ್ದೇವೆ. ಹೈಕೋರ್ಟ್ ಹೇಳಿದರೂ ಪಾಟ್ ಹೋಲ್ ಮುಚ್ಚಲು ಅವರಿಗೆ ಆಗಿರಲಿಲ್ಲ. ಒಬ್ಬ ಕಮೀಷನರ್‌ಗೆ ಇಷ್ಟು ನಿಭಾಯಿಸುವುದು ಕಷ್ಟ. ಸಾರ್ವಜನಿಕ ಹಿತದೃಷ್ಟಿಯಿಂದ ಎರಡು ಮೂರು ಭಾಗ ಮಾಡಬೇಕು. ವಿಪರೀತ ಮಳೆಯಾದಾಗ ಕಷ್ಟ. ಬಿಜೆಪಿಯವರು ತಮ್ಮ ಅವಧಿಯಲ್ಲಿ ಮಳೆ ಬಂದಾಗ ಏನೂ ಮಾಡಲಿಲ್ಲ ಎಂದು ಹರಿಹಾಯ್ದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಕೈಲಿ ಇಲಾಖೆ ನಿರ್ವಹಿಸುವುದು ಕಷ್ಟ ಎಂಬ ಪ್ರಶ್ನೆಗೆ, ಆ ರೀತಿ ಏನೂ ಇಲ್ಲ. ಒಂದಲ್ಲ ನಾಲ್ಕು ಖಾತೆ ನಿಭಾಯಿಸಬಹುದು ಎಂದು ಪ್ರತಿಕ್ರಿಯಿಸಿದರು.

ಶಾಸಕ ಮುನಿರತ್ನ ಲೋಕಾಯುಕ್ತರಿಗೆ ದೂರು ನೀಡಿರುವ ವಿಚಾರ ಕುರಿತ ಪ್ರಶ್ನೆಗೆ, ದೂರು ಕೊಡುವ ಮುನ್ನ ಅಧಿಕೃತ ದಾಖಲೆ ಇರಬೇಕು. ದಾಖಲೆ ಇಲ್ಲದೆ ಊಹಾಪೋಹದ ಮೇಲೆ ಮಾಡಬಾರದು.

ಏನಾದರೂ ಇದ್ದರೆ ದೂರು ಕೊಡಬೇಕು. ಅವರ ನಡುವೆ ಒಬ್ಬರೊಬ್ಬರಿಗೆ ಆಗುವುದಿಲ್ಲ. ಹಾಗಾಗಿ ಮಾಡಿರಬಹುದು ಎಂದರು.

ಬೆಂಗಳೂರಿನಲ್ಲಿ ಅಭಿವೃದ್ಧಿ ಕೆಲಸಗಳು ನಿಧಾನ ಆಗುತ್ತಿವೆ. ಬಿಲ್‌ಗಳು ಪೆಂಡಿಂಗ್ ಇವೆ ಎಂಬ ಬಿಜೆಪಿ ಆರೋಪದ ಬಗ್ಗೆ, ಬಿಜೆಪಿಯವರು 6 ಸಾವಿರ ಕೋಟಿ ಪೆಂಡಿಂಗ್ ಇಟ್ಟಿದ್ದರು. ಅದರಿಂದಾಗಿಯೇ ಪಾಟ್ ಹೋಲ್ ಸಮಸ್ಯೆ ಆಗಿದೆ ಎಂದು ಉತ್ತರಿಸಿದರು.

ರಾಜ್ಯಪಾಲರಿಂದ ವಿಧೇಯಕ ವಾಪಸ್ ಕಳಿಸಿರುವ ಕುರಿತ ಪ್ರಶ್ನೆಗೆ, ಮುಜರಾಯಿ ಅರ್ಚಕರ ಸಹಾಯಕ್ಕೆ ವಿಧೇಯಕ ತರಲಾಗಿತ್ತು. ವಿಧೇಯಕ ಬಹಳ ಸಿಂಪಲ್ ಇತ್ತು. ಆದರೆ, ಎರಡನೇ ಬಾರಿಗೆ ವಾಪಸ್ ಕಳಿಸಿದ್ದಾರೆ. ಈಗ ನಾನೇ ಅವರನ್ನು ಭೇಟಿ ಮಾಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net