ಪೊಲೀಸರ ಮೇಲೇ ಹಲ್ಲೆಗೆ ಮುಂದಾದ ದರೋಡೆಕೋರರು; ಗುಂಡು ಹಾರಿಸಿದ ಇನ್​ಸ್ಪೆಕ್ಟರ್

Pistol
Published on

ಬೀದರ್: ಬಂಧಿಸಲು ಹೋಗಿದ್ದ ಪೊಲೀಸರ ಮೇಲೆಯೇ ದರೋಡೆಕೋರರು ಹಲ್ಲೆ ಮಾಡಲು ಮುಂದಾಗಿದ್ದು, ಬಳಿಕ ಸರ್ಕಲ್ ಪೊಲೀಸ್ ಇನ್​ಸ್ಪೆಕ್ಟರ್​ ಗುಂಡು ಹಾರಿಸಬೇಕಾದ ಪ್ರಸಂಗ ಎದುರಾಗಿತ್ತು. ಬೀದರ್​ನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಇಲ್ಲಿನ ಮೈಕೂರ್​ನ ರಿಂಗ್​ರೋಡ್​ನಲ್ಲಿ ಈ ಘಟನೆ ನಡೆದಿದೆ. ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖದೀಮರನ್ನು ತಮಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಹೆಡೆಮುರಿ ಕಟ್ಟಲು ಪೊಲೀಸರು ಮುಂದಾಗಿದ್ದ ಸಂದರ್ಭದಲ್ಲಿ ಈ ಹಲ್ಲೆಯತ್ನ ನಡೆದಿದೆ.

ಇಬ್ಬರು ದರೋಡೆಕೋರರು ಪೊಲೀಸರ ಮೇಲೇ ಹಲ್ಲೆ ಮಾಡಲು ಬಂದಾಗ ಬೀದರ್​ ರೂರಲ್ ಸಿಪಿಐ ಮಲ್ಲಿಕಾರ್ಜುನ ಯಾತನೂರ್ ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಹಾರಿಸಿದ್ದರು. ಬಳಿಕ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದರು. ಆದರೆ ಇನ್ನೊಬ್ಬ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಪಿಎಸ್ಐ ನಾಗೇಂದ್ರ ಮತ್ತು ಸಿಬ್ಬಂದಿ ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net