ಡಿಸಿ ಕಚೇರಿ ಎದುರಲ್ಲೇ ಜಿಪಂ ಸದಸ್ಯನನ್ನು ಕೊಚ್ಚಿದ ದುಷ್ಕರ್ಮಿಗಳು

MarilyngappaKarnal
Published on

ಯಾದಗಿರಿ: ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಇಂದು ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳ ಸದ್ದು ಮೊಳಗಿದ್ದು, ಜಿಲ್ಲಾ ಪಂಚಾಯಿತಿಯ ವಿರೋಧ ಪಕ್ಷದ ನಾಯಕ ಮರಿಲಿಂಗಪ್ಪ ಕರ್ನಾಳ್ ಮೇಲೆ ಭೀಕರ ಹಲ್ಲೆ ಮಾಡಲಾಗಿದೆ.

ಸುರಪುರ ತಾಲೂಕಿನ ಖಾನಾಪುರ ಎಸ್.ಎಚ್. ಕ್ಷೇತ್ರದ ಜಿಪಂ ಸದಸ್ಯರಾದ ಮರಿಲಿಂಗಪ್ಪ ಅವರು ಶಾಸಕ ರಾಜೂಗೌಡರ ಪರಮಾಪ್ತ. ಇಂದು ಬೆಳಗ್ಗೆ ಏಕಾಏಕಿ ದಾಳಿ ನಡೆಸಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮರಿಲಿಂಗಪ್ಪರನ್ನು ಮನಸೋಇಚ್ಛೆ ಕೊಚ್ಚಿ ಬಿಸಾಡಿ ಹೋಗಿದ್ದಾರೆ. ಇದನ್ನೂ ಓದಿರಿ VIDEO| ಕರೊನಾಗೆ ಹೆದರಬೇಡಿ: ಪೊಲೀಸರಿಗೆ ಯೋಗ ಟೀಚರ್ ಆಗಿ ಧೈರ್ಯ ತುಂಬಿದ ಅಲೋಕ್​ ಕುಮಾರ್​!

ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮರಿಲಿಂಗಪ್ಪ ಕರ್ನಾಳ್ ಅವರನ್ನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ನಡುವೆ ನರಳಾಡುತ್ತಿದ್ದಾರೆ. ಜಿಪಂ ಬಿಜೆಪಿ ಸದಸ್ಯ ಮರಿಲಿಂಗಪ್ಪರ ಮೇಲೆ ನಡೆದ ಮಾರಣಾಂತಿಕ ದಾಳಿಗೆ ಗಿರಿನಗರದ ಜನತೆ ಬೆಚ್ಚಿಬಿದ್ದಿದ್ದಾರೆ. ಮಾರಕಸ್ತ್ರವೊಂದನ್ನು ಸ್ಥಳದಲ್ಲೇ ದುಷ್ಕರ್ಮಿಗಳು ಬಿಟ್ಟು ಪರಾರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net