ಪತ್ರ ಕೊಡಲು ಬಂದ ಪೋಸ್ಟ್​ಮ್ಯಾನ್​ಗೆ ಮಾರಕಾಸ್ತ್ರಗಳಿಂದ ಹಲ್ಲೆ... ಅಲ್ಲಿ ನಡೆದಿದ್ದಾದರೂ ಏನು?

postman
Published on

ಮಂಗಳೂರು: ತನ್ನ ಹೆಸರಿಗೆ ಬಂದಿದ್ದ ರಿಜಿಸ್ಟರ್ ಕಾಗದ ನೀಡಲೆಂದು ಬಂದ ಅಂಚೆ ಕಚೇರಿಯ ಪೋಸ್ಟ್​ಮ್ಯಾನ್ ಮೇಲೆಯೇ ಯುವಕನೊಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ.

ನಗರದ ಅಶೋಕನಗರ ಅಂಚೆ ಕಚೇರಿಯ ಪೋಸ್ಟ್​ಮ್ಯಾನ್, ಕೋಟೆಕಾರ್ ನಿವಾಸಿ ದಿನೇಶ್ (49) ಗಾಯೊಂಡಿದ್ದಾರೆ. ಎಂದಿನಂತೆ ಕಚೇರಿಯಿಂದ ಕಾಗದ ಬಟವಾಡೆ ಮಾಡಲು ಮಠದಕಣಿಗೆ ದಿನೇಶ್​ ಇಂದು ತೆರಳಿದ್ದರು. ಈ ವೇಳೆ ಮಠದಕಣಿ ನಿವಾಸಿ ಮನೀಶ್(21) ಎಂಬಾತ ದಿನೇಶ್​ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದು, ಅವರ ಬೈಕ್​ ಅನ್ನೂ ಹಾನಿ ಮಾಡಿದ್ದಾನೆ. ಇದನ್ನೂ ಓದಿರಿ ಕಂಡವರ ಹೆಂಡ್ತಿ ಜತೆ ಅವಿವಾಹಿತನ ಲವ್ವಿ ಡವ್ವಿ… ಆಕೆಯ ಮನೆಯವರಿಗೆ ತಾನೇ ಫೋಟೋ ಕಳಿಸಿ ಗುಟ್ಟನ್ನು ರಟ್ಟು ಮಾಡಿದ!

ಮನೀಶ್‌ಗೆ ಬಂದಿದ್ದ ರಿಜಿಸ್ಟ್ರಾರ್ ಪತ್ರ ಕೊಡಲೆಂದು ದಿನೇಶ್​ ತೆರಳಿದ್ದರು. ಈ ವೇಳೆ ತಡವಾಗಿ ಪತ್ರ ಕೊಡುತ್ತಿದ್ದೀರಿ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಮಾರಕಾಸ್ತ್ರದಿಂದ ಏಕಾಏಕಿ ಹಲ್ಲೆ ಮಾಡಿದ್ದಾನೆ. ಈತನಿಂದ ತಪ್ಪಿಸಿಕೊಳ್ಳಲು ಪೋಸ್ಟ್​ಮ್ಯಾನ್ ಓಡಿ ಹೋಗಿದ್ದು, ಸ್ಥಳದಲ್ಲೇ ಇದ್ದ ಅವರ ಬೈಕ್ ಅನ್ನು ಮನೀಶ್​ ಪುಡಿಗಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net