ಎಟಿಎಂನಲ್ಲಿ ಜ್ಯೋತಿ ಉದಯ್​ ಮೇಲೆ ಮಾರಣಾಂತಿಕ ಹಲ್ಲೆ: ಅಪರಾಧಿಗೆ ಇಂದು ಶಿಕ್ಷೆ ವಿಧಿಸಿದ ಕೋರ್ಟ್​!

Feature
Published on

ಬೆಂಗಳೂರು: 7 ವರ್ಷಗಳ ಹಿಂದೆ ನಗರದ ಕಾರ್ಪೋರೇಶನ್​ ವೃತ್ತದಲ್ಲಿನ ಕಾರ್ಪೋರೇಶನ್​ ಬ್ಯಾಂಕ್​ ಎಟಿಎಂನಲ್ಲಿ ಬ್ಯಾಂಕ್​ ಅಧಿಕಾರಿ ಜ್ಯೋತಿ ಉದಯ್​ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚೀಬಿಳಿಸಿತ್ತು. ಈ ಪ್ರಕರಣದ ಅಪರಾಧಿ ಮಧುಕರ್​ ರೆಡ್ಡಿಗೆ 65ನೇ ಸಿಟಿ ಸಿವಿಲ್​ ಮತ್ತು ಸೆಷನ್ಸ್​ ನ್ಯಾಯಾಲಯ ಇಂದು(ಫೆ.2) ಶಿಕ್ಷೆ ಪ್ರಮಾಣ ಪ್ರಕಟಿಸಿದೆ.

2013ರ ನ.19ರ ಬೆಳಗ್ಗೆ 7.10ರಲ್ಲಿ ಜ್ಯೋತಿ ಉದಯ್​ ತನ್ನ ಮಗಳ ಹುಟ್ಟುಹಬ್ಬಕ್ಕೆ ಉಡುಗೊರೆ ಖರೀದಿಸುವ ಸಲುವಾಗಿ ಕಾರ್ಪೋರೇಷನ್ ವೃತ್ತದ ಬಳಿಯಿದ್ದ ಎಟಿಎಂಗೆ ಹಣ ಡ್ರಾ ಮಾಡಲು ಬಂದಿದ್ದರು. ಈ ವೇಳೆ ಅಲ್ಲಿಗೆ ಬಂದ ಮಧುಕರ್ ರೆಡ್ಡಿ ಎಟಿಎಂ ಬಾಗಿಲು ಮುಚ್ಚಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಸಿಸಿ ಕ್ಯಾಮರಾದಲ್ಲಿ ಆರೋಪಿ ಎಸಗಿರುವ ಕೃತ್ಯ ಸೆರೆಯಾಗಿತ್ತು. ಜ್ಯೋತಿ ಉದಯ್​ ಗಂಭೀರವಾಗಿ ಗಾಯಗೊಂಡು ಬಲಗೈ ಮತ್ತು ಬಲಗಾಲು ಸ್ವಾಧಿನ ಕಳೆದುಕೊಂಡಿದ್ದರು. ಬಿಜಿಎಸ್​ ಆಸ್ಪತ್ರೆಯಲ್ಲಿ 6 ತಿಂಗಳ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು.ಕೆಲ ವರ್ಷಗಳಿಂದ ಕರ್ನಾಟಕ ಪೊಲೀಸರು ವಿವಿಧ ರಾಜ್ಯಗಳಲ್ಲಿ ಆರೋಪಿಗಾಗಿ ಶೋಧ ನಡೆಸಿದರೂ ಆತನ ಸಣ್ಣ ಕುರಿತು ಸುಳಿವೂ ಸಿಕ್ಕಿರಲಿಲ್ಲ. ಇದನ್ನೂ ಓದಿರಿ ಪ್ರಿಯಕರನ ಕರೆ ಬಂತೆಂದು ಮನೆಯಿಂದ ಹೊರ ಹೋದ ಬಾಲಕಿ ಶವವಾಗಿ ಪತ್ತೆ! ಆ ರಾತ್ರಿಯ ರಹಸ್ಯ ಇಲ್ಲಿದೆ

ಆಂಧ್ರದಲ್ಲಿ ಸಿಕ್ಕಿಬಿದ್ದಿದ್ದ ಕಿರಾತಕ: 2017ರ ಫೆ.5ರಂದು ಆರೋಪಿ ಮಧುಕರ್​ ರೆಡ್ಡಿ ಆಂಧ್ರದ ಮದನಪಲ್ಲಿಯಲ್ಲಿ ಅಲ್ಲಿನ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ವಿಚಾರಣೆ ವೇಳೆ ಆಂಧ್ರದಲ್ಲಿ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಜತೆಗೆ, ಬೆಂಗಳೂರಿನಲ್ಲಿ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದು ತಾನೇ ಎಂದು ತಿಳಿಸಿದ್ದ. ಬಳಿಕ ಬೆಂಗಳೂರು ಪೊಲೀಸರು ಆತನನ್ನು ನಗರಕ್ಕೆ ಕರೆ ಕರೆತಂದು ವಿಚಾರಣೆ ನಡೆಸಿದ್ದರು. ಎಸ್​ಜೆ ಪಾರ್ಕ್​ ಪೊಲೀಸರು 2017ರ ಮೇ 8 ರಂದು ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಿದ್ದರು.

ಕೋರ್ಟ್​ ವಿಚಾರಣೆ ವೇಳೆ ಜ್ಯೋತಿ ಉದಯ್​ ಮೇಲೆ ಹಲ್ಲೆ ನಡೆಸಿದ್ದು ನಾನೇ ಎಂದು ಮಧುಕರ್​ ರೆಡ್ಡಿ ಒಪ್ಪಿಕೊಂಡಿದ್ದ. ಈ ಪ್ರಕರಣದಲ್ಲಿ ವಿಚಾರಣೆ ಮಾಡಬೇಕೆಂದಿಲ್ಲ. ಇಂದೇ ನನಗೆ ಶಿಕ್ಷೆ ಕೊಡಿ. ನನ್ನ ಪರವಾಗಿ ವಕೀಲರು ವಾದ ಮಂಡಿಸುವುದು ಬೇಡ. ನನಗೆ ಹೆಂಡತಿ ಮಕ್ಕಳಿದ್ದಾರೆ. ಆದಷ್ಟು ಬೇಗ ಅವರ ಬಳಿ ಹೋಗಬೇಕು. ಕೂಡಲೇ ನನಗೆ ಶಿಕ್ಷೆ ಕೊಡಿ ಎಂದು ತನಿಖಾಧಿಕಾರಿಗಳನ್ನು ಬೇಡಿಕೊಂಡಿದ್ದ.

ಕೊನೆಗೂ ಇಂದು(ಫೆ.2) ವಿಡಿಯೋ ಕಾನ್ಫರೆನ್ಸ್​ ಮೂಲಕ ತೀಪುರ್ ನೀಡಿದ 65ನೇ ಸಿಟಿ ಸಿವಿಲ್​ ಮತ್ತು ಸೆಷನ್ಸ್​ ನ್ಯಾಯಾಲಯ ಅಪರಾಧಿ ಮಧುಕರ್​ ರೆಡ್ಡಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸಾಕ್ಷಿ ನಾಶ ಪಡಿಸಿದ ಹಿನ್ನೆಲೆಯಲ್ಲಿ ಎರಡು ವರ್ಷ ಜೈಲುಶಿಕ್ಷೆ, ಕೊಲೆ ಯತ್ನ ಪ್ರಕರಣಕ್ಕೆ 10 ವರ್ಷ ಜೈಲು ವಾಸ ಸೇರಿ ಒಟ್ಟು 12 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿರಿ ಕೈ ಕೊಟ್ಟ ಪ್ರೇಯಸಿಯ ಬರ್ತ್​ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ

ವೀರಪ್ಪನ್​ ಸೆರೆ ಕಾರ್ಯಾಚರಣೆಯಷ್ಟೇ ದೊಡ್ಡದು: ಜ್ಯೋತಿ ಉದಯ್​ ಮೇಲೆ ಹಲ್ಲೆ ಮಾಡಿ ಎಸ್ಕೇಪ್​ ಆಗಿದ್ದ ಮಧುಕರ್​ ರೆಡ್ಡಿಗಾಗಿ ಆಂಧ್ರಪ್ರದೇಶ ಮತ್ತು ಕರ್ನಾಟಕದ 400 ಪೊಲೀಸರು ಹಗಲಿರುಳು ಶೋಧ ನಡೆಸಿದ್ದರು. ಇದು ಕಾಡುಗಳ್ಳ ವೀರಪ್ಪನ್​ ಬಂಧನ ಕಾರ್ಯಾಚರಣೆಯಷ್ಟೇ ದೊಡ್ಡದಾಗಿತ್ತು. ಆರೋಪಿ ಭಾವಚಿತ್ರವಿದ್ದ 4 ಸಾವಿರಕ್ಕೂ ಹೆಚ್ಚು ಭಿತ್ತಿಪತ್ರಗಳನ್ನು ಕರ್ನಾಟಕ,ಆಂಧ್ರ ಮತ್ತು ತಮಿಳುನಾಡು ಗಡಿಭಾಗದಲ್ಲಿ ಅಂಟಿಸಿ ಸುಳಿವು ಸಿಕ್ಕರೆ ಮಾಹಿತಿ ಕೊಡಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿತ್ತು. ಬೆಂಗಳೂರು ಪೊಲೀಸರು ಆರೋಪಿ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಇನಾಮು ಘೋಷಿಸಿದ್ದರೆ ಆಂಧ್ರ ಪೊಲೀಸರೂ ಪ್ರತ್ಯೇಕವಾಗಿ 5 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಆರಂಭದಲ್ಲಿ ಮಧುಕರ್​ ರೆಡ್ಡಿ ಸತ್ತು ಹೋಗಿರಬಹುದು ಎಂಬ ಅನುಮಾನವೂ ಪೊಲೀಸರ ತಲೆಹೊಕ್ಕಿತ್ತು. ಕೊನೆಗೂ ಸಿಕ್ಕಿಬಿದ್ದ ಮಧುಕರ್​ ರೆಡ್ಡಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net