ಮಸೀದಿ ಬಳಿ ಕರಪತ್ರ ಹಂಚುತ್ತಿದ್ದ ಜೆಡಿಎಸ್ ಅಭ್ಯರ್ಥಿ ಮೇಲೆ ಹಲ್ಲೆ ಯತ್ನ?

JDS
Published on

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ದಿನಗಣನೆ ನಡೆಯುತ್ತಿರುವುದರಿಂದ ಪ್ರಚಾರ ಕಾವೇರಿದೆ. ಎಲ್ಲ ಪ್ರಮುಖ ಪಕ್ಷಗಳ ನಾಯಕರು ತರಾತುರಿಯ ಪ್ರಚಾರದಲ್ಲಿ ತೊಡಗಿದ್ದು, ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದೆ. ಈ ನಡುವೆ ಅಭ್ಯರ್ಥಿಯೊಬ್ಬರ ಮೇಲೆ ಹಲ್ಲೆ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಗೋವಿಂದರಾಜು ಅವರ ಮೇಲೆ ಈ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ. ಇಂದು ಶುಕ್ರವಾರವಾದ್ದರಿಂದ ಮಸೀದಿ ಬಳಿ ಪ್ರಚಾರಕ್ಕೆ ತೆರಳಿ ಕರಪತ್ರ ಹಂಚುತ್ತಿರುವಾಗ ಹಲ್ಲೆ ಯತ್ನ ನಡೆದಿದೆ ಎಂದು ಆರೋಪ ಮಾಡಲಾಗಿದೆ.

ಕಾರ್ಯಕರ್ತರೊಂದಿಗೆ ತೆರಳಿದ್ದ ಅಭ್ಯರ್ಥಿ ಅಲ್ಲಿ ಕರಪತ್ರ ಹಂಚಿ ಪ್ರಚಾರದಲ್ಲಿ ತೊಡಗಿ ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾಗ, ಇಲ್ಲೇಕೆ ಬಂದಿದ್ದೀರಿ ಎಂದು ಒಂದಷ್ಟು ಮಂದಿ ಪ್ರಶ್ನಿಸಿದ್ದಾರೆ. 'ಕಾಂಗ್ರೆಸ್​ನವರು ಮಸೀದಿ ಕಟ್ಟಿದ್ದು, ನೀವು ಯಾಕೆ ಬಂದಿದ್ದೀರಾ?' ಎಂದು ಪ್ರಶ್ನೆ ಮಾಡಿದ್ದ ಕೆಲವರು ಬಳಿಕ ಕೆಲವರು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎಂದು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಗೋವಿಂದರಾಜು ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net