ಅಸ್ಸಾಂನಲ್ಲಿ 2ನೇ ಮದುವೆ ಬ್ಯಾನ್​; ಬಹುಪತ್ವಿತ್ನ ತಡೆಗೆ ಸಿಎಂ ಹಿಮಂತ ಮಹತ್ವದ ಹೆಜ್ಜೆ

Hindu Marriage
Published on

ನವದೆಹಲಿ: ಬಾಳ ಸಂಗಾತಿ ಜೀವಂತವಾಗಿರುವಾಗ ವೈಯಕ್ತಿಕ ಕಾನೂನು ಬಳಸಿ ಅಸ್ಸಾಂ ಸರ್ಕಾರದ ಯಾವುದೇ ನೌಕರರು ಎರಡನೇ ಮದುವೆಯಾಗುವಂತಿಲ್ಲ. ಸರ್ಕಾರದ ಅನುಮತಿ ಪಡೆಯದೇ ಯಾರಿಗೂ 2ನೇ ವಿವಾಹಕ್ಕೆ ಅವಕಾಶವಿಲ್ಲ ಮಹತ್ವದ ಕ್ರಮವನ್ನು ಅಸ್ಸಾಂ ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿದೆ.

ಯಾವುದೇ ಸಮುದಾಯ/ಧರ್ಮವನ್ನು ಉಲ್ಲೆಖಿಸದೆ ಈ ಬಗ್ಗೆ ಮಾಹಿತಿ ನೀಡಿದ ಸಿಎಂ ಹಿಮಂತ ಬಿಸ್ವ ಶರ್ಮ, ತಮ್ಮ ಧರ್ಮವು ದ್ವಿಪತ್ನಿತ್ವವನ್ನು ಅನುಮತಿಸಿದರೂ ಅಸ್ಸಾಂ ಸರ್ಕಾರಿ ಉದ್ಯೋಗಿಗಳಿಗೆ ಎರಡನೇ ಮದುವೆಗೆ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯ. ಸರ್ಕಾರಿ ನೌಕರನಾಗಿದ್ದ ಪತಿಯ ಮರಣದ ನಂತರ ಆತನ ಇಬ್ಬರು ಪತ್ನಿಯರು ಗಂಡನ ಪಿಂಚಣಿಗಾಗಿ ಕಿತ್ತಾಡಿಕೊಳ್ಳುವ ಎಷ್ಟೋ ಪ್ರಕರಣಗಳನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ.

ಈ ಹೊಸ ನಿಯಮದ ಬಗ್ಗೆ ಅಸ್ಸಾಂ ಸರ್ಕಾರ ತನ್ನ ನೌಕರ ವರ್ಗಕ್ಕೆ ಅಕ್ಟೋಬರ್​ 20ರಂದು ನೀಡಲಾದ ಕಚೇರಿ ಸುತ್ತೋಲೆಯಲ್ಲಿ ಮಾಹಿತಿ ನೀಡಿದೆ. ಯಾವುದೇ ಮಹಿಳಾ ಸರ್ಕಾರಿ ನೌಕರರು ಕೂಡ ಪತಿ ಜೀವಂತವಾಗಿದ್ದಾಗ ಸರ್ಕಾರದ ಅನುಮತಿಯನ್ನು ಪಡೆಯದೆ ಎರಡನೇ ಮದುವೆಯಾಗುವಂತಿಲ್ಲ ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ ಬಹುಪತ್ನಿತ್ವವನ್ನು ತಣವೇ ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ವರ್ಷದ ಆರಂಭದಲ್ಲೆ ಸಿಎಂ ಹಿಮಾಂತ ಶರ್ಮ ಹೇಳಿದ್ದರು. ಸೆಪ್ಟೆಂಬರ್​ನ ಅಸೆಂಬ್ಲಿ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಯೋಚಿಸಿದ್ದೇವೆ. ಒಂದುವೇಳೆ ಸಾಧ್ಯವಾಗದಿದ್ದರೆ, ಅದನ್ನು ಜನವರಿಯ ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net