More

    Tiger 3 Bath Towel Scene: ಕತ್ರಿನಾ ಬಾತ್​ ಟವೆಲ್​ ಸೀನ್…ಆಕೆ ಜತೆ ಫೈಟ್​ ಮಾಡಿದ್ದು ಯಾರು ಗೊತ್ತಾ?

    ಮುಂಬೈ: ಸಲ್ಮಾನ್ ಖಾನ್, ಕತ್ರಿನಾ ಕೈಫ್ ಜೊತೆಯಾಗಿ ನಟಿಸುತ್ತಿರುವ ಟೈಗರ್ 3′ ಆಕ್ಷನ್​ – ಥ್ರಿಲ್ಲರ್​ ಚಿತ್ರವಾಗಿ ಮೂಡಿಬರುತ್ತಿದೆ. ಚಿತ್ರದಲ್ಲಿ ಟರ್ಕಿಯ ಹಮಾಮ್‌ನಲ್ಲಿ ಟವೆಲ್ ಫೈಟ್ ದೃಶ್ಯದಲ್ಲಿ ಕತ್ರಿನಾ ಕಾಣಿಸಿಕೊಂಡಿದ್ದು, ಟ್ರೈಲರ್​ನಲ್ಲೂ ಈ ದೃಶ್ಯವಿದೆ. ಇದು ನೆಟ್ಟಿಗರನ್ನು ಫಿದಾ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ: ಸ್ಟಾರ್​ ನಟನ ಸಿನಿಮಾದಿಂದ ಹೊರಬಂದ್ರಾ ನಟಿ ಶ್ರೀಲೀಲಾ?
    ಈ ಸೀಕ್ವೆನ್ಸ್​ ನಿಂದಾಗಿ ಚಿತ್ರವು 1000ಕೋಟಿ ರೂ. ಬಾಚುವುದು ಗ್ಯಾರಂಟಿ ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ. ಟವೆಲ್ ಫೈಟ್ ಸೆಟ್-ಪೀಸ್ ‘ಟೈಗರ್ 3’ ಟ್ರೇಲರ್‌ನ ದೊಡ್ಡ ಟಾಕಿಂಗ್ ಪಾಯಿಂಟ್‌ಗಳಲ್ಲಿ ಒಂದಾಗಿದೆ ಎಂದು ಕತ್ರಿನಾ ಜೊತೆ ಫೈಟ್​ ಮಾಡಿರುವ ಪ್ರಮುಖ ಹಾಲಿವುಡ್​ ನಟಿ ಮಿಚೆಲ್ ಲೀ ಸಹ ಹೇಳುತ್ತಾರೆ. ನಾನು ಮತ್ತು ಕತ್ರಿನಾ ಈ ಸೀನ್​ ಚಿತ್ರೀಕರಿಸುವ ಮೊದಲು ಎರಡು ವಾರ ಪೂರ್ವಾಭ್ಯಾಸ ಮಾಡಿದ್ದೇವೆ ಎಂದು ಅವರು ಹೇಳುತ್ತಾರೆ.

    ನಮ್ಮ ದೇಹಕ್ಕೆ ಸುತ್ತಿಕೊಂಡಿರುವ ಟವೆಲ್‌ಗಳನ್ನು ನಿರ್ವಹಿಸುವುದು ದೊಡ್ಡ ಸವಾಲಾಗಿತ್ತು. ಮತ್ತೊಂದು ಸವಾಲು ಪರಸ್ಪರ ಕಡಿಮೆ ಅಂತರದಲ್ಲಿ ಹೊಡೆದಾಡುವುದು. ಇದು ಅಪಾಯಕಾರಿ ಎನಿಸಿದರೂ ನಮಗಿಬ್ಬರಿಗೂ ಹೊಡೆತ ಬೀಳಲಿಲ್ಲ. ಕತ್ರಿನಾ ವೃತ್ತಿಪರತೆ ಅಲ್ಲಿ ಎದ್ದುಕಾಣುತ್ತಿತ್ತು, ಈ ಒಂದು ಚಿಕ್ಕ ಸೀನ್​ಗೆ ಇಷ್ಟೊಂದು ಮೆಚ್ಚುಗೆ ಬಂದಿರುವುದು ಸಂತಸ ತಂದಿದೆ ಎನ್ನುತ್ತಾರೆ.

    ‘ಟೈಗರ್ 3’ ನಲ್ಲಿ ಕತ್ರಿನಾ ಕೈಫ್ ಪಾಕಿಸ್ತಾನಿ ಏಜೆಂಟ್ ಜೋಯಾ ಪಾತ್ರದಲ್ಲಿ ನಟಿಸಿದ್ದಾರೆ. ಮಿಚೆಲ್ ಲೀ ಜತೆ ಟವೆಲ್‌ ಮಾತ್ರ ಸುತ್ತಿಕೊಂಡು ಟರ್ಕಿಯ ಹಮಾಮ್‌ನಲ್ಲಿ ಮಿಚೆಲ್ ಲೀ ಜೊತೆ ಹೋರಾಡುತ್ತಿರುವುದನ್ನು ಟ್ರೈಲರ್ ತೋರಿಸುತ್ತದೆ.

    ಸಲ್ಮಾನ್​ಗೆ ಗೆಲುವು ತಂದುಕೊಟ್ಟಿದ್ದ ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’, ‘ಯುದ್ಧ’ ಮತ್ತು ‘ಪಥಾನ್’ ನ ಮುಂದಿವರಿದ ಭಾಗವಾಗಿ ‘ಟೈಗರ್ 3’ ಬಂದಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮತ್ತೊಮ್ಮೆ ಜೋಡಿಯಾಗಿ ನಟಿಸಿದ್ದಾರೆ. ಆದಿತ್ಯ ಚೋಪ್ರಾ ನಿರ್ಮಿಸಿದ್ದು, ಮನೀಶ್ ಶರ್ಮಾ ನಿರ್ದೇಶನವಿದೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಈ ಚಿತ್ರವು ದೀಪಾವಳಿ(ಅ.12)ರಂದು ಬಿಡುಗಡೆಯಾಗಲಿದೆ.

    ಸಾಕಷ್ಟು ಜನಪ್ರಿಯತೆ ಗಳಿಸಿದ್ದ ‘ಕಾಂತಾರ’ 54ನೇ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts