ಸ್ಟಾರ್​ ನಟನ ಸಿನಿಮಾದಿಂದ ಹೊರಬಂದ್ರಾ ನಟಿ ಶ್ರೀಲೀಲಾ?

Untitled design - 2023-10-28T124740.239
Published on

ಆಂಧ್ರಪ್ರದೇಶ: ಸ್ಯಾಂಡಲ್​ವುಡ್​ನ 'ಕಿಸ್'​ ಬೆಡಗಿ ನಟಿ ಶ್ರೀಲೀಲಾ ಸದ್ಯ ಟಾಲಿವುಡ್​ ಅಂಗಳದಲ್ಲಿ ಸ್ಟಾರ್​ ನಟರ ಸಿನಿಮಾಗಳಿಗೆ ನಾಯಕಿಯಾಗಿ ಮಿಂಚುತ್ತಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮುಖೇನ ಸಕತ್​ ಬ್ಯುಸಿಯಾಗಿರುವ ನಟಿ ಇದೀಗ ತೆಲುಗು ಚಿತ್ರರಂಗದ ಸ್ಟಾರ್​ ನಟ ವಿಜಯ್​ ದೇವರಕೊಂಡ ಅಭಿನಯಿಸಲಿರುವ ಮುಂದಿನ ಚಿತ್ರದಿಂದ ಹೊರನಡೆದಿದ್ದಾರೆ ಎಂದು ವದಂತಿಯೊಂದು ವ್ಯಾಪಕವಾಗಿ ಹರಿದಾಡಿದೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವ ಶ್ರೀಲೀಲಾ ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರದಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರದಲ್ಲಿ ವಿಜಯ್​ ದೇವರಕೊಂಡ ಮತ್ತು ಶ್ರೀಲೀಲಾ ನಾಯಕ-ನಾಯಕಿಯಾಗಿ ನಟಿಸಬೇಕಿತ್ತು. ಆದ್ರೆ, ದಿನಾಂಕಗಳ ತೊಂದರೆಯಿಂದ ನಟಿ ಚಿತ್ರವನ್ನು ಬೇರೆ ದಾರಿಯಿಲ್ಲದ ಕೈಬಿಟ್ಟಿದ್ದಾರೆ ಎನ್ನಲಾಗಿದೆ.

ಡೇಟ್ ಸಮಸ್ಯೆಯಿಂದ ಶ್ರೀಲೀಲಾ ಇದೀಗ ಈ ಸಿನಿಮಾದಿಂದ ಹೊರನಡೆದಿದ್ದಾರೆ ಎಂಬುದು ಇತ್ತೀಚಿನ ವರದಿ. ಚಿತ್ರದ ಶೂಟಿಂಗ್​ ಮುಂದೂಡಲ್ಪಟ್ಟ ಕಾರಣ ಡೇಟ್ಸ್​ ತೊಂದರೆಯಾಗಿದೆ. ಇದೀಗ ಶ್ರೀಲೀಲಾ ಪಾತ್ರಕ್ಕೆ ನಾಯಕಿಯಾಗಿ 'ಏಜೆಂಟ್' ಚಿತ್ರದ ಖ್ಯಾತಿಯ ಸಾಕ್ಷಿ ವೈದ್ಯ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಕುರಿತಂತೆ ಅಧಿಕೃತ ಘೋಷಣೆಗೆ ನಿರೀಕ್ಷಿಸಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net