More

    ಭಾರತದ ಮಾವು ರಫ್ತು ಶೇ.19ಕ್ಕೆ ಏರಿಕೆ: ಅಮೆರಿಕಾಗೇ ಹೆಚ್ಚು ಉತ್ಪನ್ನ ಮಾರಾಟ

    ನವದೆಹಲಿ: ಭಾರತವು 2023ರ ಮಾವು ಸೀಸನ್​ನಲ್ಲಿ $47.98 ಮಿಲಿಯನ್ ಮೌಲ್ಯದ ಮಾವಿನಹಣ್ಣನ್ನು ರಫ್ತು ಮಾಡಿದೆ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.19 ಉತ್ಪನ್ನ ರಫ್ತು ಹೆಚ್ಚಾಗಿದ್ದು, ಮೌಲ್ಯವು 8ಮಿಲಿಯನ್​ ಯುಎಸ್​ ಡಾಲರ್​ ಹೆಚ್ಚಾಗಿದೆ. 2022ರಲ್ಲಿ $40.33 ಮಿಲಿಯನ್ ಮೌಲ್ಯದ ಮಾವಿನ ಹಣ್ಣನ್ನು ರಫ್ತು ಮಾಡಲಾಗಿತ್ತು.

    ಇದನ್ನೂ ಓದಿ: ಈರುಳ್ಳಿ ಏಕೆ ದುಬಾರಿಯಾಯಿತು…ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಮಾಡಿದ ವ್ಯವಸ್ಥೆಯೇನು ಗೊತ್ತಾ?

    ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಸಹಯೋಗದೊಂದಿಗೆ APEDA 2023ರ ಏಪ್ರಿಲ್‌ನಿಂದ ಆಗಸ್ಟ್ 2023 ರವರೆಗೆ 27,330.02 ಮೆಟ್ರಿಕ್​ ಟನ್​ ಮಾವಿನಹಣ್ಣನ್ನು ರಫ್ತು ಮಾಡಲು ಅನುಕೂಲ ಮಾಡಿಕೊಟ್ಟಿತ್ತು.

    ಭಾರತದ ಒಟ್ಮಾಟಾರೆ ಉತ್ವುಪನ್ನದಲ್ಲಿ ಅಮೆರಿಕಾಗೆ ಶೇ.19 ರಫ್ತು ಅಮೆರಿಕಾಗೆ ಮಾಡಲಾಗಿದೆ. ಸೀಸನ್ ನ ಮೊದಲ ಐದು ತಿಂಗಳಲ್ಲಿ ಒಟ್ಟು 2043.60 ಮೆಟ್ರಿಕ್​ ಟನ್​ ರಫ್ತು ಮಾಡಲಾಗಿದೆ. ಅಮೆರಿಕಾ ಹೊರತುಪಡಿಸಿ ಜಪಾನ್ (43.08 ಮೆಟ್ರಿಕ್​ ಟನ್​), ನ್ಯೂಜಿಲೆಂಡ್ (110.99 ಮೆ.ಟ), ಆಸ್ಟ್ರೇಲಿಯಾ (58.42 ಮೆ.ಟ) ಮತ್ತು ದಕ್ಷಿಣ ಆಫ್ರಿಕಾ (4.44 ಮೆ.ಟ) ಮಾವು ರಫ್ತು ಮಾಡಲಾಗಿದೆ.

    ಭಾರತವು ಈ ವರ್ಷ ಮಾವಿನ ರಫ್ತು 41 ದೇಶಗಳಿಗೆ ವಿಸ್ತರಿಸಿತು, ಇರಾನ್, ಮಾರಿಷಸ್, ಜೆಕ್ ರಿಪಬ್ಲಿಕ್ ಮತ್ತು ನೈಜೀರಿಯಾದಲ್ಲಿ ಹೊಸ ಮಾರುಕಟ್ಟೆ ಕಂಡುಕೊಳ್ಳಲಾಗಿದೆ. 2023 ರ ಸೀಸನ್​ನಲ್ಲಿ ಮಾವಿನ ರಫ್ತು ಹೆಚ್ಚಿಸಲು, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು APEDA ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್​ಮೆಂಟ್ ಆಫ್ ಅಗ್ರಿಕಲ್ಚರ್ (USDA), ಪ್ರಾಣಿ ಮತ್ತು ಸಸ್ಯ ಆರೋಗ್ಯ ತಪಾಸಣೆ ಸೇವೆ (APHIS) ನಿರೀಕ್ಷಕರನ್ನು ಬೆಂಗಳೂರು, ನಾಸಿಕ್​ ಮತ್ತು ಅಹಮದಾಬಾದ್ ನಲ್ಲಿ ನೇಮಿಸಿ ರಫ್ತು ಮಾಡುವುದಕ್ಕೆ ಮುನ್ನ ಮಾವಿನ ಹಣ್ಣುಗಳನ್ನು ಪೂರ್ವಭಾವಿಯಾಗಿ ಪರೀಕ್ಷಿಸಿ ಗುಣಮಟ್ಟ ಕಾಯ್ದುಕೊಂಡಿದ್ದು, ರಫ್ತು ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.

    ಇನ್ನು ದಕ್ಷಿಣ ಕೊರಿಯಾದ ಇನ್‌ಸ್ಪೆಕ್ಟರ್‌ಗಳನ್ನು ಮಾವಿನಹಣ್ಣಿನ ಗುಣಮಟ್ಟ ಪರೀಕ್ಷೆ ಮತ್ತು ರಫ್ತು ಮಾಡಲು ಪೂರ್ವನಿರ್ಧಾರಕ್ಕಾಗಿ ಆಹ್ವಾನಿಸಲಾಗಿತ್ತು. ಆವಿ(ಬಿಸಿಗಾಳಿ) ಚಿಕಿತ್ಸೆಗೆ ಒಳಪಡಿಸುವ ಮೂಲಕ ಸಂಸ್ಕರಣೆ ಮಾಡಿದ ನಂತರ 18.43 ಮೆಟ್ರಿಕ್​ ಟನ್​ ಮಾವಿನಹಣ್ಣುಗಳನ್ನು ಬಹ್ರೇನ್‌ಗೆ ರಫ್ತು ಮಾಡಲು ಅನುವು ಮಾಡಿಕೊಡಲಾಯಿತು. ಸಿಯೋಲ್ ಆಹಾರ ಮತ್ತು ಹೋಟೆಲ್ ಪ್ರದರ್ಶನದಲ್ಲಿ ಭಾರತೀಯ ಮಾವಿನಹಣ್ಣುಗಳನ್ನು APEDA ಪ್ರದರ್ಶಿಸಿತ್ತು. ಭಾರತದ 75 ನೇ ಸ್ವಾತಂತ್ರ್ಯೋತ್ಸವ(ಆಜಾದಿ ಕಾ ಅಮೃತ್ ಮಹೋತ್ಸವ)ದ ಅಂಗವಾಗಿ APEDA 5 GI-ಟ್ಯಾಗ್ ಮಾಡಿ 75 ತಳಿಯ ಮಾವಿನ ಬಗ್ಗೆ ಪರಿಚಯಿಸಲಾಯಿತು.

    ಮಾವಿನ ಪ್ರಮುಖ ತಳಿಗಳಾದ ಆಮ್ರಪಲ್ಲಿ, ಬಂಗನಪಲ್ಲಿ, ಕೇಸರ್ ಮತ್ತು ಹಿಮಸಾಗರ್ ತಳಿಗಳನ್ನು ಒಳಗೊಂಡಂತೆ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಬ್ರಸೆಲ್ಸ್‌ನಲ್ಲಿ ಮಾವು ಸವಿಯುವ ಕಾರ್ಯಕ್ರಮ ಸೇರಿದಂತೆ ವಿವಿಧ ದೇಶಗಳಲ್ಲಿ ಭಾರತೀಯ ಸಂಸ್ಥೆಗಳ ಸಹಯೋಗದೊಂದಿಗೆ ಮಾವಿನ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.

    ಇನ್ನು ಮಲೇಷ್ಯಾದಲ್ಲಿ ಮಾವು ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕೇಸರ್ ಮತ್ತು ಬಂಗನಪಲ್ಲಿ ಮಾವಿನಹಣ್ಣುಗಳನ್ನು APEDA ಪ್ರದರ್ಶಿಸಿತು. ಇದೇ ರೀತಿಯ ಕಾರ್ಯಕ್ರಮಗಳನ್ನು ಅಫ್ಘಾನಿಸ್ತಾನ ಮತ್ತು ಕುವೈತ್‌ನಲ್ಲಿ ಆಯಾ ಭಾರತದ ರಾಯಭಾರ ಕಚೇರಿಗಳೊಂದಿಗೆ ನಡೆಸಲಾಗಿತ್ತು. ಇಂತಹ ಅನೇಕ ಕ್ರಮಗಳು ರಫ್ತು ಉತ್ತೇಜಿಸಲು ಸಹಕಾರಿಯಾಗಿತ್ತು.

    ಇನ್ಮುಂದೆ ಟಾಟಾ ಗ್ರೂಪ್‌ನಿಂದ ಭಾರತದಲ್ಲಿ ಐಫೋನ್‌ ತಯಾರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts