

ಆದರೆ ಇತ್ತೀಚೆಗೆ ಆಸಿನ್ ಮತ್ತು ಆಕೆಯ ಪತಿ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಆಸಿನ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿಯೊಂದನ್ನು ಪೋಸ್ಟ್ ಮಾಡಿದ್ದಾರೆ.
"ನಾವು ಎದುರುಗಡೆ ಕೂತು ಟಿಫಿನ್ ಮಾಡುವಾಗ ಈ ಸುದ್ದಿ ನೋಡಿದೆವು. ಇದು ಸಂಪೂರ್ಣ ಸುಳ್ಳು ಮತ್ತು ಆಧಾರ ರಹಿತ ಸುದ್ದಿಗಳಾಗಿವೆ. ಈ ಹಿಂದೆ ಕೂಡಾ ನಮ್ಮ ಮದುವೆಯ ಮುರಿದುಬಿದ್ದಿದ್ದೆ ಎಂದು ವರದಿಗಳು ಬಂದವು. ಇಂತಹ ಸುದ್ದಿಗಳಿಗೆ 5 ನಿಮಿಷ ಸಮಯ ಹಾಳು ಮಾಡಿದ್ದು ನಿರಾಸೆ ತಂದಿದೆ. ದಯವಿಟ್ಟು ಒಳ್ಳೆಯ ಸುದ್ದಿ ಬರೆಯಿರಿ" ಎಂದು ಬರೆದು ಕೊಂಡಿದ್ದಾರೆ. ಇದರೊಂದಿಗೆ ತಮ್ಮ ವಿಚ್ಛೇದನದ ಸುದ್ದಿ ಸುಳ್ಳು ಎಂದು ಅಸಿನ್ ಸ್ಪಷ್ಟಪಡಿಸಿದ್ದಾರೆ.
ಗಜನಿ, ಕೊಲ್ಲೋ, ಶಿವಮಣಿ, ಅಣ್ಣಾವರಂ.. ಮುಂತಾದ ಸೂಪರ್ ಹಿಟ್ ಸಿನಿಮಾಗಳ ಮೂಲಕ ಜನರಿಗೆ ಆಸಿನ್ ಹತ್ತಿರವಾದರು. ತೆಲುಗು, ತಮಿಳು, ಹಿಂದಿಯಲ್ಲಿ ಹಲವು ಸಿನಿಮಾಗಳನ್ನು ನಟಿಸುವ ಮೂಲಕವಾಗಿ ಸ್ಟಾರ್ ಹೀರೋಯಿನ್ ಎನಿಸಿಕೊಂಡಿದ್ದಾರೆ. 2016 ರಲ್ಲಿ, ಅವರು ಮುಂಬೈ ಮೂಲದ ಪ್ರಮುಖ ಉದ್ಯಮಿ ರಾಹುಲ್ ಶರ್ಮಾ ಅವರನ್ನು ವಿವಾಹವಾದರು ಮತ್ತು ಅಂದಿನಿಂದ ಅವರು ಚಲನಚಿತ್ರಗಳಿಂದ ದೂರವಿದ್ದಾರೆ. ಈ ಜೋಡಿಗೆ ಈಗ ಮುದ್ದಾದ ಮಗುವಿದೆ.