ಮೆಟ್ರೋ ದರಕ್ಕೆ 50% ಏರಿಕೆ! ಇದು ನೇರ ಜನದ್ರೋಹ: ಅಶ್ವಥ್ ನಾರಾಯಣ ಕಿಡಿ

ವಿಜಯವಾಣಿ - 2025-02-10T145519.275
Published on

ಬೆಂಗಳೂರು: ಸಾರಿಗೆ ಬಸ್​ ದರ ಏರಿಕೆ ಬೆನ್ನಲ್ಲೇ ಇದೀಗ ನಮ್ಮ ಮೆಟ್ರೋ ದರ ಕೂಡ ಏರಿಸಿರುವ ರಾಜ್ಯ ಸರ್ಕಾರದ ವಿರುದ್ಧ ಗುಡುಗಿರುವ ಬಿಜೆಪಿ ಶಾಸಕ ಡಾ. ಅಶ್ವಥ್​ ನಾರಾಯಣ, "ಗ್ಯಾರಂಟಿ ಸರ್ಕಾರವೇ ದರ ಏರಿಕೆಯ ಗ್ಯಾರಂಟಿ ನೀಡುತ್ತಿದೆಯಾ? 50 ರೂ. ಬಸ್ ಟಿಕೆಟ್ ಭಾರವಾದರೆ, 150ರಿಂದ 300 ರೂ. ಮೆಟ್ರೋ ಪಾಸ್ ಹೇಗೆ ನ್ಯಾಯಸಂಗತ? ಮೆಟ್ರೋ ದರಕ್ಕೆ ಶೇ.5ರಷ್ಟು ಏರಿಕೆ ಮಾಡಿರುವುದು ನೇರ ಜನದ್ರೋಹ" ಎಂದು ಕಿಡಿಕಾರಿದ್ದಾರೆ.

"ದೇಶದ ಎಲ್ಲಾ ಮೆಟ್ರೋಗಳ ಪೈಕಿ ಬೆಂಗಳೂರು ಮೆಟ್ರೋ ದರವೇ ಅತಿ ಅಧಿಕವಾಗಿದ್ದು, ದರ ಹೆಚ್ಚಳದಿಂದ ಜನರು ಮತ್ತೆ ಸ್ವಂತ ವಾಹನಗಳತ್ತ ಮುಖಮಾಡುವ ಅನಿವಾರ್ಯ ಎದುರಾಗುತ್ತಿದೆ. ದಿನಗೂಲಿ ನೌಕರರು, ವಿದ್ಯಾರ್ಥಿಗಳು, ಮಧ್ಯಮವರ್ಗದವರ ಸಂಚಾರ ಹಕ್ಕನ್ನು ಹರಣ ಮಾಡುವ ಈ ದಬ್ಬಾಳಿಕೆಯನ್ನು ತಕ್ಷಣ ನಿಲ್ಲಿಸಬೇಕು" ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ ಸಲ್ಲಿಸಲಾಗಿದ್ದ ದರ ಹೆಚ್ಚಳ ಪ್ರಸ್ತಾವನೆಯನ್ನು ಅನುಮೋದಿಸಿರುವ ರಾಜ್ಯ ಸರ್ಕಾರ, ಪ್ರಯಾಣಿಕರ ಟಿಕೆಟ್ ದರದಲ್ಲಿ ಶೇ.50ರಷ್ಟು ಏರಿಕೆ ಮಾಡಿದೆ. ಬಸ್ ದರ ಏರಿಕೆ ಬೆನ್ನಲ್ಲೇ ಬಿಎಂಆರ್​ಸಿಎಲ್​ ದರವೂ ಹೆಚ್ಚಳವಾಗಿರುವುದು ಸದ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net