

ಬೆಂಗಳೂರು: ಇಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಅಶ್ವಥ್ ನಾರಾಯಣ್, ಪ್ರಧಾನಿ ನರೇಂದ್ರ ಮೋದಿಗೆ ಸವಾಲ್ ಹಾಕಿದ ಸಿಎಂ ಸಿದ್ದರಾಮಯ್ಯ ವಿರುದ್ಧ ತಮ್ಮ ಹೇಳಿಕೆಯ ಮುಖೇನ ಇದೀಗ ತಿರುಗೇಟು ನೀಡಿದ್ದಾರೆ.
"ಗ್ಯಾರಂಟಿ ಭಾಗ್ಯಗಳನ್ನು ಚುನಾವಣೆಗೂ ಮೊದಲೇ ಘೋಷಣೆ ಮಾಡಿ ಇಂದು ಅಧಿಕಾರಕ್ಕೆ ಬಂದಿದ್ದಾರೆ. ಯೋಜನೆಗಳನ್ನು ಮಾಡಿದ್ದು ಷರತ್ತುಗಳಿಲ್ಲದೆ. ಕಂಡೀಷನ್ ಇಲ್ಲದೇ ಘೋಷಣೆ ಮಾಡುತ್ತೀವಿ ಎಂದು ಹೇಳಿದ್ದರು. ಆದ್ರೆ, ಮಾತು ಉಳಿಸಿಕೊಳ್ಳದೇ ಗ್ಯಾರಂಟಿ ಯೋಜನೆಯನ್ನು ನಾಡಿಗೆ ಕೊಟ್ಟಿದ್ದಾರೆ" ಎಂದು ಹೇಳಿದರು.
"ಗ್ಯಾರಂಟಿ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮೋದಿ ಅವರಿಗೆ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಲಭಿಸಬೇಕು. ಬಡವರು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಿದ್ದರಾಮಯ್ಯ ಅವರೇ, ನಿಮಗೆ ಬಹಳ ವರ್ಷದ ಅನುಭವವಿದೆ ಅಲ್ವಾ? ಕೌಶಲ್ಯತೆ ಹಾಗೂ ಉತ್ತಮ ಶಿಕ್ಷಣ ಕೊಡುವ ತಾಕತ್ತಿದ್ದರೆ, ನಿಮ್ಮ ಕಾಳಜಿ ಹಾಗೂ ಅನುಭವವನ್ನು ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ತೋರಿಸಿ" ಎಂದು ಹೇಳಿದರು.
"ನಿಮಗೆ ಯಾರು ವಿದ್ಯಾವಂತರು ಆಗಬಾರದು. ಅವಿದ್ಯಾವಂತರು ಅಸಹಾಯಕರು ಆಗಿರಬೇಕು. ಉತ್ತಮ ಗುಣಮಟ್ಟದ ಶಿಕ್ಷಣ ಯಾವ ರೀತಿ ಕೊಡಬೇಕು ಎಂಬುದು ಗೊತ್ತಿದೆಯೇ? ಭ್ರಷ್ಟಾಚಾರ ರಹಿತ ಆಡಳಿತ ಕೊಡುವ ಮೂಲಕ ನಿಮ್ಮ ತಾಕತ್ ಪ್ರದರ್ಶಿಸಿ. ಬರೀ ವರ್ಗಾವಣೆಗೆ ಎಲ್ಲಾ ಪೇಮೆಂಟ್ ಪೇಮೆಂಟ್.. ಪೇಮೆಂಟ್" ಎಂದು ಹೇಳುವ ಮುಖೇನ ಸಿಎಂ ಸಿದ್ದರಾಮಯ್ಯ ಅವರಿಗೆ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.