'ಅದೆಷ್ಟೋ ಜವಾಬ್ದಾರಿ ನನ್ನ ಮೇಲಿದೆ': ರಶ್ಮಿಕಾ ಹೀಗಂದಿದ್ದೇಕೆ? ವಿವರ ಇಲ್ಲಿದೆ ನೋಡಿ..

pushpa
Published on

ಹೈದರಾಬಾದ್​: ಪ್ರಸ್ತುತ ತೆಲುಗು ಪ್ರೇಕ್ಷಕರಷ್ಟೇ ಅಲ್ಲ, ಎಲ್ಲಾ ಸಿನಿಪ್ರಿಯರು 'ಪುಷ್ಪ 2: ದಿ ರೂಲ್' ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇದು ಅಲ್ಲು ಅರ್ಜುನ್ ಅಭಿನಯದ ಸ್ಟಾರ್ ಡೈರೆಕ್ಟರ್ ಸುಕುಮಾರ್ ನಿರ್ದೇಶನದ 'ಪುಷ್ಪ- ದಿ ರೈಸ್' ಚಿತ್ರದ ಮುಂದುವರಿದ ಭಾಗವಾಗಿ ಬರಲಿದೆ. ಮೊದಲ ಭಾಗದಲ್ಲಿ ಶ್ರೀವಲ್ಲಿಯಾಗಿ ರಂಜಿಸಿದ ರಶ್ಮಿಕಾ ಮಂದಣ್ಣ ಎರಡನೇ ಭಾಗದಲ್ಲೂ ತಮ್ಮ ಅಮೋಘ ಅಭಿನಯದ ಮೂಲಕ ಮನಸೂರೆಗೊಳ್ಳಲಿದ್ದಾರೆ. ಇತ್ತೀಚೆಗೆ, ಈ ಸೀಕ್ವೆಲ್‌ನಲ್ಲಿ ತನ್ನ ಪಾತ್ರದ ಬಗ್ಗೆ ರಶ್ಮಿಕಾ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಮೊದಲ ಭಾಗದ ಕೊನೆಯಲ್ಲಿ ಪುಷ್ಪರಾಜ್, ಶ್ರೀವಲ್ಲಿಯನ್ನು ಮದುವೆಯಾಗಿದ್ದು ಗೊತ್ತೇ ಇದೆ. ಇದೇ ಮಾತನ್ನು ರಶ್ಮಿಕಾ ಹೇಳಿದ್ದಾರೆ. 'ಎರಡನೇ ಭಾಗದಲ್ಲಿ ಪುಷ್ಪನ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಈ ಉತ್ತರಭಾಗವು ನೀವು ಊಹಿಸುವುದಕ್ಕಿಂತ ಹೆಚ್ಚು ಜವಾಬ್ದಾರಿಗಳಿವೆ. ಸುಕುಮಾರ್ ಪ್ರತಿ ದೃಶ್ಯವನ್ನು ಅಚ್ಚುಕಟ್ಟಾಗಿ ಮಾಡಿಸುತ್ತಿದ್ದಾರೆ. ಮೊದಲ ಭಾಗಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದರಿಂದ ಎರಡನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಿದೆ. ಕಲಾವಿದರು ದೃಶ್ಯಗಳಲ್ಲಿ ಎಷ್ಟು ಚೆನ್ನಾಗಿ ನಟಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ.

ಇನ್ನು ಪುಷ್ಪ 2' ಚಿತ್ರದ ಮಟ್ಟಿಗೆ ಹೇಳುವುದಾದರೆ, ಒಂದು ದಿನ ನನ್ನ ಕೈಲಾದಷ್ಟು ಮಾಡಿದ್ದೇನೆ ಎಂದು ಅನಿಸಿತು. ಸದ್ಯ ಇದರ ಚಿತ್ರೀಕರಣ ಶರವೇಗದಲ್ಲಿ ಸಾಗುತ್ತಿದೆ. ಚಿತ್ರವೊಂದು ಶುರುವಾಗುವುದಕ್ಕಿಂತ ಚಿತ್ರದ ಅಂತ್ಯದ ವೇಳೆಗೆ ಚಿತ್ರದ ಯೂನಿಟ್‌ನಲ್ಲಿರುವ ಪ್ರತಿಯೊಬ್ಬರೂ ನಮಗೆ ಹತ್ತಿರವಾಗುತ್ತಾರೆ. ಪುಷ್ಪಾ, ಆ ಚಿತ್ರ ಯೂನಿಟ್ ಜೊತೆ ನನಗೂ ಆ ಕಾಲದಲ್ಲಿ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಸೀಕ್ವೆಲ್ ಚಿತ್ರೀಕರಣಕ್ಕೆ ಹೋದಾಗ ನನ್ನ ಸ್ವಂತ ಮನೆಗೆ ಹೋಗುತ್ತಿರುವಂತೆ ಭಾಸವಾಯಿತು' ಎಂದರು. ಭಾರೀ ನಿರೀಕ್ಷೆಗಳ ನಡುವೆ ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net