

ಕಠ್ಮಾಂಡು (ನೇಪಾಳ): ನೆರೆಯ ರಾಷ್ಟ್ರ ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಶೀಘ್ರ ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ.
ನೇಪಾಳಿ ಕಾಂಗ್ರೆಸ್‌ನಿಂದ ಬೇರ್ಪಟ್ಟ ನಂತರ ನೇಪಾಳಿ ಪ್ರಧಾನಿ ಪ್ರಚಂಡ ಅವರು ಮಾಜಿ ಪ್ರಧಾನಿ ಒಲಿ ಅವರ ಪಕ್ಷದೊಂದಿಗೆ ಹೊಸ ಸರ್ಕಾರವನ್ನು ರಚಿಸಲಿದ್ದಾರೆ ಎನ್ನಲಾಗುತ್ತಿದೆ.
ಒಲಿ ಅವರ ಸಿಪಿಎನ್-ಯುಎಂಎಲ್ ಪಕ್ಷದ ಜೊತೆಗೆ ರಬಿ ಲಮಿಚಾನೆ ಅವರ ಪಕ್ಷ ಆರ್‌ಎಸ್‌ಪಿ, ಜೆಎಸ್‌ಪಿ ಮತ್ತು ಜನ್ಮತ್ ಪಾರ್ಟಿ ಪ್ರಚಂಡ ಸರ್ಕಾರಕ್ಕೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.
ನೇಪಾಳಿ ಪ್ರಧಾನಿ ಪ್ರಚಂಡ ನೇಪಾಳಿ ಕಾಂಗ್ರೆಸ್ ಜೊತೆಗೂಡಿ ಸರ್ಕಾರ ನಡೆಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಒಂದಷ್ಟು ಏರಿಳಿತಗಳಿದ್ದರೂ ಸರ್ಕಾರ ಬೀಳಬಹುದು. ಇಲ್ಲಿಯವರೆಗೆ, ನೇಪಾಳವು ಮಾವೋವಾದಿ ಕೇಂದ್ರ, ನೇಪಾಳಿ ಕಾಂಗ್ರೆಸ್‌ನ ಸಮ್ಮಿಶ್ರ ಸರ್ಕಾರವನ್ನು ಹೊಂದಿತ್ತು. ರಾಷ್ಟ್ರೀಯ ಅಸೆಂಬ್ಲಿ ಅಧ್ಯಕ್ಷರ ಪ್ರಶ್ನೆ ಎದುರಾದ್ದರಿಂದ ದೇಶದ ಎರಡು ಪ್ರಮುಖ ಪಕ್ಷಗಳ ನಡುವಿನ ಬಿರುಕು ಹೆಚ್ಚಾಗಲು ಕಾರಣವಾಗಿದೆ. ಇದರಿಂದಾಗಿ ಈ ಮೈತ್ರಿ ಮುಂದುವರಿಕೆ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಪ್ರಧಾನಿ ಪ್ರಚಂಡ ನೇಪಾಳಿ ಕಾಂಗ್ರೆಸ್‌ನಿಂದ ಬೇರ್ಪಟ್ಟು ಮಾಜಿ ಪ್ರಧಾನಿ ಒಲಿ ಅವರ ಪಕ್ಷದೊಂದಿಗೆ ಸರ್ಕಾರ ರಚಿಸಲಿದ್ದಾರೆ ಎಂದು ವರದಿಯಾಗಿದೆ.