More

    ‘INDIA’ ಮೈತ್ರಿಕೂಟಕ್ಕೆ ಹೊಡೆತ: ಬಿಜೆಪಿ ಪಾಲಾದ ಆ ಎರಡು ಪ್ರಮುಖ ಹುದ್ದೆ

    ಚಂಡೀಗಢ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಚಂಡೀಗಢ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ‘INDIA’ ಮೈತ್ರಿಕೂಟಕ್ಕೆ ಭಾರೀ ಹೊಡೆತ ಬಿದ್ದಿದೆ. ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಸೋತಿದ್ದಾರೆ. ಈ ಎರಡೂ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

    ಇದನ್ನೂ ನೋಡಿ: ಸನಾತನ ಧರ್ಮದ ಬಗ್ಗೆ ಉದಯನಿಧಿ ಟೀಕೆ.. ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್.. ಏನಿದು?

    ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ‘INDIA’ ಒಕ್ಕೂಟಕ್ಕೆ ಭಾರೀ ಮುಖಭಂಗವಾಗಿದೆ. ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಕ್ರಮವಾಗಿ ಕುಲ್ಜೀತ್ ಸಿಂಗ್ ಸಂಧು, ಉಪಮೇಯರ್ ಆಗಿ ರಾಜೇಂದ್ರ ಶರ್ಮಾ ಗೆಲುವು ಸಾಧಿಸಿದ್ದಾರೆ.

    ಕುಲ್ಜೀತ್ ಸಿಂಗ್ ಸಂಧು 19 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಗುರುಪ್ರೀತ್ ಸಿಂಗ್ ಗಾಬಿ 16 ಮತ ಪಡೆದರು. ಒಂದು ಮತ ಅಮಾನ್ಯವಾಗಿದೆ. ರಾಜೇಂದ್ರ ಶರ್ಮಾ ಅವರು ತಮ್ಮ ಸಮೀಪದ ಕಾಂಗ್ರೆಸ್ ಅಭ್ಯರ್ಥಿ ನಿರ್ಮಲಾ ದೇವಿ ಅವರನ್ನು ಸೋಲಿಸಿದರು. ಒಟ್ಟು 36 ಮತಗಳಲ್ಲಿ ಶರ್ಮಾ ಅವರಿಗೆ 19 ಹಾಗೂ ದೇವಿ ಅವರಿಗೆ 17 ಮತಗಳು ಬಿದ್ದವು.

    ಜನವರಿ 30ರಂದು ಚಂಡೀಗಢದ ಮೇಯರ್ ಚುನಾವಣೆ ನಡೆದಿದ್ದು, ಆಗ ಉಂಟಾದ ಗೊಂದಲ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಎಎಪಿ ಮತ್ತು ಕಾಂಗ್ರೆಸ್ ಚುನಾವಣೆ ನಡೆಸಿದ್ದು ಮತ್ತು ಸ್ಥಳೀಯ ಕೋರ್ಟ್​ ತೀರ್ಪು ನೀಡಿದ ರೀತಿಗೆ ಸುಪ್ರೀಂ ಕೋರ್ಟ್ ಸಭಾಧ್ಯಕ್ಷರಿಗೆ ಛೀಮಾರಿ ಹಾಕಿತ್ತು. ಇದರ ಹಿನ್ನೆಲೆಯಲ್ಲಿ ಇತ್ತೀಚೆಗೆ ಉಪಮೇಯರ್ ಮತ್ತು ಹಿರಿಯ ಉಪಮೇಯರ್ ಚುನಾವಣೆ ನಡೆಸಲಾಯಿತು.

    ಕಾಂಗ್ರೆಸ್ ಮತ್ತು ಎಎಪಿ ಮೈತ್ರಿಕೂಟ 20 ಕೌನ್ಸಿಲರ್‌ಗಳನ್ನು ಹೊಂದಿದ್ದರೆ, ಇತ್ತೀಚೆಗೆ ಮೂವರು ಬಿಜೆಪಿ ಸೇರಿದ್ದಾರೆ. ಪದನಿಮಿತ್ತ ಸದಸ್ಯರಾಗಿ ಮತದಾನದ ಹಕ್ಕು ಹೊಂದಿರುವ ಚಂಡೀಗಢ ಸಂಸದ ಕಿರಣ್ ಖೇರ್ ಮತ್ತು ಶಿರೋಮಣಿ ಅಕಾಲಿದಳದ ಕೌನ್ಸಿಲರ್ ಬಿಜೆಪಿ ಪರವಾಗಿ ಮತ ಚಲಾಯಿಸಿ ಬಿಜೆಪಿಗೆ 19 ಸ್ಥಾನಗಳನ್ನು ನೀಡಿದರು.

    ‘ನನ್ನ ಜೀವನ ತೆರೆದ ಪುಸ್ತಕ, 140 ಕೋಟಿ ಜನರೇ ನನ್ನ ಕುಟುಂಬ..’: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts