

ನವದೆಹಲಿ: ಅಪರಾಧ ಲೋಕದಲ್ಲಿ ಕುಖ್ಯಾತನಾದ ಮನೋಜ್ ಬಕ್ಕರ್ವಾಲಾನ ಮಗ ಆಶೀಶ್ನನ್ನು ಪೊಲೀಸರು ಎನ್ಕೌಂಟರ್ ನಡೆಸಿ ಬಂಧಿಸಿದ್ದಾರೆ.
ಕಾರ್ಜಾಕಿಂಗ್ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ಸೇರಿ 60 ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಮನೋಜ್ ಬಕ್ಕರವಾಲಾನ ಮಗ ಆಶೀಶ್.
ಆತನನ್ನು ರೋಹಿಣಿ ಬಳಿಯ ಪ್ರಹ್ಲಾದಪುರದಲ್ಲಿ ಬುಧವಾರ ನಡೆದ ಎನ್ಕೌಂಟರ್ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆತ ಅಪರಾಧ ಲೋಕದ ಬಗ್ಗೆ ಅತೀವ ಆಕರ್ಷಿತನಾಗಿದ್ದ. ಕುಖ್ಯಾತನಾಗಿದ್ದ ತನ್ನ ತಂದೆಯನ್ನೇ ಅನುಸರಿಸಿ ಆರಾಧಿಸುತ್ತಿದ್ದ. ತಂದೆಯಂತೆಯೇ ಆಗಬೇಕೆಂದು ಬಯಸಿದ್ದ. ಆತನ ಸುಳಿವು ನೀಡಿದವರಿಗೆ 1 ಲಕ್ಷ ರೂ. ಘೋಷಿಸಲಾಗಿತ್ತು.
ಪೊಲೀಸ್ ತಂಡವು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡಿನಿಂದ ಆತನ ಕಾಲಿಗೆ ಗಾಯವಾಗಿದೆ. ಆತನಿಂದ ಮೂರು ಸಜೀವ ಕಾರ್ಟ್ರಿಡ್ಜ್ಗಳು ಮತ್ತು ಒಂದು ಬಂದೂಕನ್ನು ಪೊಲೀಸ್ ತಂಡ ವಶಪಡಿಸಿಕೊಂಡಿದೆ. '' ಬಕ್ಕರ್‌ವಾಲಾ ಕಾರ್ಜಾಕಿಂಗ್ ಮತ್ತು ಪೊಲೀಸ್ ಸಿಬ್ಬಂದಿಗೆ ಮೇಲೆ ಗುಂಡಿನ ದಾಳಿ ಸೇರಿ ಅಂದಾಜು 60 ಅಪರಾಧ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದಾನೆನ್ನಲಾಗಿದೆ. ಅವನು ತನ್ನ ತಂದೆ ಮನೋಜ್ ಬಕ್ಕರ್ವಾಲಾನ ಅಪರಾಧ ಜೀವನದ ಕುರಿತು ಆಕರ್ಷಿತನಾಗಿದ್ದರಿಂದ ಅವನಂತೆಯೇ ಆಗಲು ಬಯಸಿದ್ದ. ತಂದೆಯ ಆರಾಧಕನಾಗಿದ್ದ" ಎಂದು ಡಿಸಿಪಿ (ವಿಶೇಷ ಕೋಶ)ಸಂಜೀವ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಆಶಿಶ್, ತನಗೆ ಒಂದು ಕೋಟಿ ರೂ. ಹಣ ಕೊಡಲೊಪ್ಪದ ತನ್ನ ಗ್ರಾಮದ ಆಸ್ತಿ ವ್ಯಾಪಾರಿಯ ಕೊಲೆಗೆ ಸಂಚು ರೂಪಿಸಿದ್ದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.
ವ್ಯಕ್ತಿಯೊಬ್ಬನ ಕೊಲೆಗೈದು ಬಾವಾರಾ ಕಾಲುವೆಯಲ್ಲಿ ಎಸೆದಿದ್ದ ಆರೋಪದಲ್ಲಿ ಆತ ಹಾಗೂ ಆತನ ಸ್ನೇಹಿತರನ್ನು ಬಂಧಿಸಲಾಗಿತ್ತು.
ಫೆಬ್ರವರಿಯಿಂದ ಆತ ಜಾಮೀನಿನ ಮೇಲೆ ಹೊರಬಂದಿದ್ದ. ಆನಂತರ ಮತ್ತೆ ಸುಲಿಗೆಗಾಗಿ ಜನರನ್ನು ಬೆದರಿಸಲಾರಂಭಿಸಿದ್ದ.
ಮೇ 17 ರಂದು ಆತ ತನ್ನ ಗೆಳೆಯ ಅಮಿತ್ ನೊಂದಿಗೆ ಬಕ್ಕರ್‌ವಾಲಾ ನಿವಾಸಿ ಸತ್ಪಾಲ್ ಮನೆಯ ಮೇಲೆ ಗುಂಡು ಹಾರಿಸಿ 1 ಕೋಟಿ ರೂ.ಹಣಕ್ಕೆ ಬೇಡಿಕೆಯಿಟ್ಟಿದ್ದ. 1 ಕೋಟಿ ರೂ. ಸುಲಿಯಲು ವೈದ್ಯರೊಬ್ಬರಿಗೆ ಬೆದರಿಯೊಡ್ಡಿದ್ದ.