'ನಾ ಸಾಮಿ ರಂಗ' ರಿಲೀಸ್: ನಟ ನಾಗಾರ್ಜುನ ಹೇಳಿಕೆಗೆ ಆಶಿಕಾ ರಂಗನಾಥ್ ಪ್ರತಿಕ್ರಿಯೆ ಹೀಗಿದೆ!

ವಿಜಯವಾಣಿ-2024-01-14T155612.906
Published on

ಬೆಂಗಳೂರು: 'ನಾ ಸಾಮಿ ರಂಗ' ಚಿತ್ರದ ಮೂಲಕ ಟಾಲಿವುಡ್​ ಅಂಗಳಕ್ಕೆ ಕಾಲಿಟ್ಟ ಸ್ಯಾಂಡಲ್​ವುಡ್​ ಮಿಲ್ಕಿ ಬ್ಯೂಟಿ, ನಟಿ ಆಶಿಕಾ ರಂಗನಾಥ್, ಇಂದು ಬಿಡುಗಡೆಗೊಂಡ ತಮ್ಮ ಬಹುನಿರೀಕ್ಷಿತ ಸಿನಿಮಾಗೆ ಲಭಿಸುತ್ತಿರುವ ಪ್ರತಿಕ್ರಿಯೆ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರ ರಿಲೀಸ್ ಆಗುವ ಮುನ್ನ ನಡೆದಿದ್ದ ಹಲವಾರು ಸಂದರ್ಶನಗಳಲ್ಲಿ ನಟ ನಾಗಾರ್ಜುನ್,​ ಆಶಿಕಾ ನಟನೆ ಮೆಚ್ಚಿ, ಭರವಸೆ ಮಾತುಗಳನ್ನು ಆಡಿದ್ದರು. ಈ ಬಗ್ಗೆ ನಟಿ ಕೊಟ್ಟ ಪ್ರತಿಕ್ರಿಯೆ ಹೀಗಿದೆ.

'ನಾ ಸಾಮಿ ರಂಗ' ಚಿತ್ರದ ಮೂಲಕ ಆಶಿಕಾ ಟಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಒಳ್ಳೊಳ್ಳೆ ಅವಕಾಶಗಳನ್ನು ಪಡೆಯುತ್ತಾರೆ ಎಂದು ನಾಗಾರ್ಜುನ್​ ಭರವಸೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಆಶಿಕಾ, “ನಾಗಾರ್ಜುನ ಸರ್ ತುಂಬಾ ಒಳ್ಳೆ ಮನಸ್ಸಿನ ವ್ಯಕ್ತಿ. ಶೂಟಿಂಗ್ ಸಮಯದಲ್ಲಿ ನನಗೆ ತುಂಬಾ ಸಹಾಯ ಮಾಡಿದರು. ಅವರಿಂದ ಇಂತಹ ಮಾತುಗಳನ್ನು ಕೇಳುವುದು ನಿಜಕ್ಕೂ ನನ್ನ ವೃತ್ತಿಜೀವನಕ್ಕೆ ತುಂಬ ಪ್ರೋತ್ಸಾಹ ನೀಡಿದೆ” ಎಂದು ಹೇಳಿದರು.

"ಚಿತ್ರದಲ್ಲಿ ನಾನು ವರಲು ಎಂಬ ಪಾತ್ರವನ್ನು ನಿರ್ವಹಿಸಿದ್ದೇನೆ. ಈ ಪಾತ್ರ ನನಗೆ ತುಂಬ ಸ್ಕೋಪ್ ನೀಡಿದೆ ಹಾಗೂ ಸಿನಿಮಾ ಹಿಟ್ ಆಗಲಿದೆ ಎಂಬ ವಿಶ್ವಾಸವಿದೆ” ಎಂದು ಆಶಿಕಾ ಹೇಳಿದ್ದಾರೆ. ಹಳ್ಳಿ ಕಥೆಯುಳ್ಳ ಈ ಚಿತ್ರದಲ್ಲಿ ಅಲ್ಲರಿ ನರೇಶ್, ರಾಜ್ ತರುಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net